ಕರ್ನಾಟಕ

ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತಿರುಗಿ ಬಿದ್ದ ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದ್ದೇನು…?

Pinterest LinkedIn Tumblr

ಬೆಂಗಳೂರು: ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಇದೀಗ ಶಾಸಕ ಸುರೇಶ್ ಕುಮಾರ್ ತಿರುಗಿ ಬಿದ್ದಿದ್ದಾರೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಕನ್ನಡ ಯೋಗ್ಯ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ಕೇಂದ್ರ ಸಚಿವರಾಗಿ ಆ ಕನ್ನಡ, ಈ ಕನ್ನಡ, ಯೋಗ್ಯ ಕನ್ನಡ ಅನ್ನಬಾರದು. ಚಾಮರಾಜನಗರದಿಂದ ಬೀದರ್ ತನಕವೂ ಯೋಗ್ಯ ಕನ್ನಡ ಇದೆ. ಬೆಂಗಳೂರಿಗನಾಗಿ ನಾನು ಯೋಗ್ಯ ಕನ್ನಡ ಮಾತಾಡ್ತೀನಿ. ಜವಾಬ್ದಾರಿಯುತ ಕೇಂದ್ರ ಸಚಿವರಾಗಿ ಅನಂತಕುಮಾರ್ ಹೆಗಡೆ ಈ ರೀತಿ ಮಾತನಾಡಬಾರದಿತ್ತು. ಹೀಗಾಗಿ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ಹೆಗ್ಡೆ ನೀಡಿದ್ದ ಹೇಳಿಕೆಯೇನು?: ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಅಡಿಯಲ್ಲಿ ಆರಂಭಿಸಲಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದ ಹೆಗ್ಡೆಯವರು, ಇಂಗ್ಲಿಷ್ ಅನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದಿನ ಸವಾಲು. ಶುದ್ಧ ಕನ್ನಡ ಯಾರಲ್ಲೂ ಇಲ್ಲ. ಎಲ್ಲೋ ಒಂದು ಕಡೆ ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಪ್ರದೇಶದವರನ್ನು ಹೊರತುಪಡಿಸಿದರೆ ಇತರರಿಗೆ ಸರಿಯಾಗಿ ಕನ್ನಡ ಮಾತನಾಡುವ ಯೋಗ್ಯತೆಯೇ ಇಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದನ್ನೂ ಓದಿ: ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸಚಿವ ಹೆಗ್ಡೆ ಯಿಂದ ಕೇಸ್ ದಾಖಲು

ಬೆಂಗಳೂರಿನ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಅಲ್ಲಿನ ಸ್ಥಿತಿ ಚಿಂತಾಜನಕವಾಗಿದೆ. ಬೇಸಿಕ್ ಸ್ಕಿಲ್ ಇಲ್ಲದ ಸಿದ್ದಣ್ಣ ಸರಕಾರ ಇದೆ. ರೀಜನಲ್ ಸ್ಕಿಲ್ ಗ್ಯಾಪ್ ಎನಾಲಿಸಿಸ್ ಮಾಡಲು ಕೇಂದ್ರ ಸರಕಾರ ನಮ್ಮ ರಾಜ್ಯ ಸರಕಾರಕ್ಕೆ ಅನುದಾನ ನೀಡಿದೆ. ಅದನ್ನು ನಮ್ಮ ಸಿದ್ದಣ್ಣ ಸರಕಾರ ಹೇಗೆ ಬಳಸುತ್ತದೋ ನೋಡಬೇಕು. ಬೇಸಿಕ್ ಸ್ಕಿಲ್ ಇಲ್ಲದವರು ಏನು ಮಾಡುತ್ತಾರೆ ಎಂದು ಲೇವಡಿ ಮಾಡಿದ್ದರು.

Comments are closed.