ಕರ್ನಾಟಕ

ಗ್ರಾಮೀಣ ಜನರಿಗೆ ಬಜೆಟ್ ನಲ್ಲಿ ಬಂಪರ್ ಗಿಫ್ಟ್!

Pinterest LinkedIn Tumblr


ಬೆಂಗಳೂರು: ಗ್ರಾಮೀಣ ಜನರಿಗೆ ವಾಸಸ್ಥಳದಲ್ಲೇ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಲ ಕೃಷಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈಗಾಗಲೇ ನಿರ್ಮಿಸಲಾಗಿರುವ ವ್ಯಕ್ತಿಗತ ಕೊಳಗಳಲ್ಲಿ ಹಾಗೂ ಕೊಳಗಳಲ್ಲಿ ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ‘ನೀಲಿ ಕ್ರಾಂತಿ’ ಯೋಜನೆಯ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಜಲ ಕೃಷಿ ಕಾರ್ಯಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದೆ.

ಗ್ರಾಮ ಪಂಚಾಯತಿಗಳ ದಾಖಲೆ ಮತ್ತು ದಾಖಲಾತಿಗಳನ್ನು ಗಣಕೀಕರಣಗೊಳಿಸಲು ಯೋಜಿಸಲಾಗಿದ್ದು, ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ಇದಕ್ಕಾಗಿ 5 ಕೋಟಿ ರು. ಅನುದಾನ ಮೀಸಲಿರಿಸಿದೆ. ಉಳಿದಂತೆ ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯ ಗುಣಮಟ್ಟ ಕಾಪಾಡಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯೂ ವೃತ್ತಗಳಿಗೆ ಒಂದರಂತೆ 8 ವೃತ್ತಗಳಿಗೆ 8 ಪ್ರತ್ಯೇಕ ಗುಣನಿಯಂತ್ರಣ ಉಪ-ವಿಭಾಗಗಳನ್ನು ಸ್ಥಾಪಿಸಲಾಗುವುದು. ಜತೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರ ಸಾಮರ್ಥ್ಯ ನಿರ್ಮಾಣ ಮಾಡಲು ಸ್ಥಳೀಯ ನಾಯಕತ್ವದ ಬೆಳವಣಿಗೆಗಾಗಿ ಸ್ಥಳೀಯವಾಗಿ ತರಬೇತಿ ನೀಡಲು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉಪಗ್ರಹ ಸ್ವೀಕೃತಿ ಕೇಂದ್ರಗಳನ್ನು ನಿರ್ಧರಿಸಲಾಗಿದೆ.

Comments are closed.