ಕರ್ನಾಟಕ

ಸಿದ್ದರಾಮಯ್ಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ !

Pinterest LinkedIn Tumblr

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಸಾಲದಿಂದ ಬೇಸತ್ತ ರೈತರಿಗೆ ಸಿಹಿ ¸ಸುದ್ದಿ ನೀಡಿದ್ದಾರೆ. ಕೃಷಿ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು, ಹಲವು ಹೊಸ ಯೋಜನೆಗಳನ್ನ ಘೋಷಿಸಿದ್ದಾರೆ. 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಒಟ್ಟು 5,849 ಕೋಟಿ ರೂ. ಒದಗಿಸಲಾಗಿದೆ.

ಸತತ ಬರಗಾಲದಿಂದ ಕಂಗೆಟ್ಟ ರೈತರಿಗೆ ಸಾಲದ ಹೊರೆಯನ್ನು ಕೂಡಲೇ ಕಡಿಮೆಗೊಳಿಸಲು ಪ್ರಸಕ್ತ ವರ್ಷದಲ್ಲಿ ಸರ್ಕಾರ 8165 ಕೋಟಿ ರೂ. ವೆಚ್ಚದಲ್ಲಿ ಸಾಲ ಮನ್ನಾ ಯೋಜನೆ ಘೋಷಿಸಿದೆ.

ಇದರಿಂದ ರಾಜ್ಯದಲ್ಲಿ 22,27,506 ರೈತರಿಗೆ ಅನುಕೂಲವಾಗಿದೆ. ಈ ಮೊತ್ತದ ಒಂದು ಭಾಗವನ್ನು ಈಗಾಗಲೇ ಪ್ರಸಕ್ತ ವರ್ಷದ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಒದಗಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

ಸಾಲ ಮನ್ನಾ ಪ್ರಮುಖ ಅಂಶಗಳು ಹೀಗಿವೆ:
2015ರ ಸೆಪ್ಟೆಂಬರ್ 30ಕ್ಕೆ ಸುಸ್ತಿಯಾಗಿರುವ ಎಲ್ಲಾ ಬಗೆಯ ಕೃಷಿ ಸಾಲಗಳ ಅಸಲನ್ನು 2017ರ ಮಾರ್ಚ್ 31ರೊಳಗೆ ಪಾವತಿಸದ ರೈತರ 124.70 ಕೋಟಿ ರೂ. ಮೊತ್ತದ ಪೂರ್ಣ ಬಡ್ಡಿ ಮನ್ನಾ.
ಕಳೆದ 4 ವರ್ಷಗಳ ಅವಧಿಯಲ್ಲಿ 10.7 ಲಕ್ಷ ರೈತರ 2359 ಕೋಟಿ ರೂ. ಬಡ್ಡಿ ಮನ್ನಾ
2017ರ ಜೂನ್ 20ಕ್ಕೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ. ವರೆಗಿನ ಸಾಲ ಮನ್ನಾ.
ಇದರಿಂದ ರಾಜ್ಯದ 22,27,506 ರೈತರ ಒಟ್ಟು 8165 ಕೋಟಿ ರೂ. ಸಾಲ ಮನ್ನಾ ಆಗಿದೆ.

ಹೊಸ ಯೋಜನೆಗಳು:
ಕೃಷಿ ಹೊಂಡಗಳು ಮತ್ತು ಪಾಲಿ ಹೌಸ್ ಗಳ ನಿರ್ಮಾಣ, ಮಣ್ಣು ಕಾರ್ಡ್ ವಿತರಣೆ.
ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ 90% ಸಹಾಯಧನ, ರೈತರಿಗೆ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಬಾಡಿಗೆಗೆ ನೀಡಿಕೆ, ಹಾಲು ಉತ್ಪಾದನಾ ಸಹಾಯಧನ.
ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆ.
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಾಣ.
ದೇಶದಲ್ಲೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ನೀಡಲಾಗ್ತಿದೆ. ಇದರ ಜೊತೆ 3% ಬಡ್ಡಿ ದರದಲ್ಲಿ 3 ರಿಂದ 10 ಲಕ್ಷದವರೆಗೆ ಸಾಲ.
ಖುಷ್ಕಿ ಭೂಮಿಯ ಸಂಕಷ್ಟಗಳನ್ನ ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ‘ರೈತ ಬೆಳಕು’ ಎಂಬ ವಿಶಿಷ್ಟ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾರಂಭ.
2018-19ರಿಂದ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿ ವರ್ಷ ಪ್ರತಿ ರೈತನಿಗೆ ಗರಿಷ್ಠ 10 ಸಾವಿರ ರೂ.
ಪ್ರತಿ ಹೆಕ್ಟೇರ್‍ಗೆ 5 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ವರ್ಗಾವಣೆ.
ಯೋಜನೆಗೆ ಪ್ರತಿ ವರ್ಷ 3500 ಕೋಟಿ ರೂ. ಖರ್ಚು, ಅಂದಾಜು 70 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2018-19ನೇ ಸಾಲಿಗೆ ರಾಜ್ಯದ ಪಾಲು ಭರಿಸಲು 845 ಕೋಟಿ ರೂ. ಅನುದಾನ.
2018-19ನೇ ಸಾಲಿನಲ್ಲಿ ಸಿರಿಧಾನ್ಯಗಳ ವಿಸ್ತೀರ್ಣ 60 ಸಾವಿರ ಹೆಕ್ಟೇರ್‍ಗೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮ- 24 ಕೋಟಿ ರೂ. ಅನುದಾನ.
ನೆಲಗಡಲೆ ಬೆಳೆಯುವ ರೈತರಿಗೆ 50 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್.
ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂ.
ಕೃಷಿ ಚಟುವಟಿಕೆ ಸಮಯದಲ್ಲಿ ಹಾವು ಕಡಿತದಿಂದ ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ 2 ಲಕ್ಷ ರೂ.ಗೆ ದ್ವಿಗುಣ
ಹುಲ್ಲು ಮೆದೆ/ಬಣವೆಗಳು ಆಕಸ್ಮಿಕ ಬೆಂಕಿಯಿಂದ ನಷ್ಟವಾಗುವ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರ ದ್ವುಗುಣ- ಗರಿಷ್ಠ 20 ಸಾವಿರ ರೂ.
ಚಾಮರಾಜನಗರದಲ್ಲಿ ನೂತನ ಕರಷಿ ಕಾಲೇಜು ಸ್ಥಾಪನೆ.

ಕರ್ನಾಟಕ ಬಜೆಟ್ 2018ರಲ್ಲಿ ರೈತರಿಗೆ ಸಿಕ್ಕಿರುವ ಸವಲತ್ತುಗಳ ಮಾಹಿತಿ ಇಲ್ಲಿದೆ:

* ಕೃಷಿಗೆ 5,080 ಕೋಟಿ ರೂ ಅನುದಾನ
*ಸಣ್ಣ ನೀರಾವರಿಗೆ 2,020 ಕೋಟಿ ರೂ ಅನುದಾನ ನೀಡಲಾಗಿದೆ
* ರೈತರಿಗೆ ಶೇ 3ರ ಬಡ್ಡಿದರಲ್ಲಿ 10 ಲಕ್ಷ ರೂ ಸಾಲ
* ರೈತರ 1 ಲಕ್ಷ ರೂ ಸಾಲಮನ್ನ, ಪ್ರಾಥಮಿಕ ಸಹಕಾರ ಕೃಷಿಪತ್ತಿನ ಸಂಘಗಳ ಸಾಲ ಮನ್ನಾ
* ಪ್ರಾಥಮಿಕ ಸಹಕಾರ ಕೃಷಿಪತ್ತಿನ ಸಂಘಗಳ ಸಾಲ ಮನ್ನಾ
*ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ
* ಮಣ್ಣಿನ ಸಾವಯವ ಪೋಷಕಾಂಶ ಹೆಚ್ಚಳಕ್ಕಾಗಿ 13,359 ಟನ್‌ ಕಂಪೋಸ್ಟ್‌ ಗೊಬ್ಬರವನ್ನು ಕೇವಲ 800 ರೂ.ಗಳಂತೆ ರೈತರಿಗೆ ಒದಗಿಸಲಾಗಿದೆ.
* 1,845 ಕೋಟಿ ರೂ.ಗಳ ವೆಚ್ಚದಲ್ಲಿ 10.96 ಲಕ್ಷ ಎಕರೆಗೆ ನೀರಾವರಿ ಒದಗಿಸಲಾಗಿದೆ.
* ಕೃಷಿ ಕ್ಷೇತ್ರಕ್ಕೆ 5,080 ಕೋಟಿ ರೂ
* ಕೃಷಿಭಾಗ್ಯ ಯೋಜನೆಗೆ 600 ಕೋಟಿ ರೂ.
* ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಲಕ್ಷ ರೂ.ಗಳಲ್ಲಿ ಗೋದಾಮು
* ರೈತರ ಉತ್ಪನ್ನಗಳು ಲಾಭದಾಯಕವಾಗಿ ಮಾರಾಟವಾಗಲು ಆನ್‌ಲೈನ್‌ ಮಾರುಕಟ್ಟೆಗೆ ಹೆಚ್ಚು ಒತ್ತು.
* ರೈತ ಬೆಳಕು ಯೋಜನೆಯಲ್ಲಿ ಪ್ರತಿ ಹೆಕ್ಟೇರಿಗೆ 5,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು. 70 ಲಕ್ಷಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆಯಲಾಗಿದೆ.
* ನೆಲಗಡಲೆ ಬೆಳೆಗಾರರಿಗೆ 50 ಕೋಟಿ ರೂ.ಗಳ ವಿಶೇಷ ನೆರವು
* ವಿಜಯಪುರದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ
* ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿ ರೂ.ಗಳ ಅನುದಾನ
* ರೈತರ ಹುಲ್ಲು, ಬಣವೆಗಳಿಗೆ ಬೆಂಕಿ ಬಿದ್ದರೆ ತಲಾ 20,000 ರೂ ಪರಿಹಾರ
* ಸಿರಿಧಾನ್ಯ ಬೆಳೆಗಳ ಯೋಜನೆ 60 ಸಾವಿರ ಹೆಕ್ಟೇರ್‌ಗಳಿಗೆ ವಿಸ್ತರಣೆ
* ಜೇನು ಬೆಳೆಗಾರರಿಗೆ ವಿಶೇಷ ನೆರವು
*ಕುರಿ ಮತ್ತು ಆಡು ಸಾಕಾಣಿಕೆಗೆ 25 ಸಾವಿರ ಘಟಕಗಳ ನಿರ್ಮಾಣ
* ಬೆಳೆ ಪೀಡೆ, ಪೋಷಕಾಂಶಗಳ ನಿರ್ವಹಣೆಗೆ 10 ಕೋಟಿ ರೂಪಾಯಿ
* ಕುರಿ, ಮೇಕೆ ಸಾಕಾಣಿಕೆ ಸಾಲಮನ್ನಾ
* ಕುರಿ ಮತ್ತು ಆಡು ಸಾಕಣೆಗೆ 25,000 ಘಟಕಗಳ ಸ್ಥಾಪನೆ
* ಕಾಲುಬಾಯಿ ರೋಗ ನಿರ್ಮೂಲನೆಗಾಗಿ ಪ್ರತಿ 6 ತಿಂಗಳಿಗೊಮ್ಮೆ ರೋಗ ನಿರೋಧಕ ಲಸಿಕೆ.
* ಹಂದಿ, ಕುರಿಗಳ ರೋಗ ನಿರ್ಮೂಲನೆಗಾಗಿ ಲಸಿಕೆ ಬಿಡುಗಡೆ.
* ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮೇವು ಬೆಳೆ ವಿಸ್ತರಣೆ
* ರಾಜ್ಯ ಮೇವು ಭದ್ರತಾ ನೀತಿ ಖಾಸಗಿ ಸಹಭಾಗಿತ್ವದಲ್ಲಿ ಜಾರಿ

Comments are closed.