ಕರ್ನಾಟಕ

30 ವರ್ಷಗಳ ಹಿಂದೆ ಹೆತ್ತವರಿಂದ ದೂರವಾಗಿ ಸ್ವೀಡನ್ ಸೇರಿದ್ದ ಮಹಿಳೆಗೆ ಕೊನೆಗೂ ಸಿಕ್ಕಿದಳು ತಾಯಿ

Pinterest LinkedIn Tumblr

ಹುಬ್ಬಳ್ಳಿ: 30 ವರ್ಷಗಳ ಹಿಂದೆ ಹೆತ್ತವರಿಂದ ದೂರವಾಗಿ ಸ್ವೀಡನ್ ಸೇರಿದ್ದ ಮಹಿಳೆಯೊಬ್ಬರು ಕೊನೆಗೂ ಹೆತ್ತ ಕರುಳಿನ ಮಡಿಲನ್ನು ಸೇರಿದ್ದಾರೆ.

ಸೋನು (33) 30 ವರ್ಷಗಳ ಬಳಿಕ ಹೆತ್ತವರ ಮಡಿಲು ಸೇರಿದ ಮಹಿಳೆಯಾಗಿದ್ದಾರೆ. ಸೋನು ಅವರು ಸ್ವೀಡನ್ ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 3 ವರ್ಷದ ಬಾಲಕಿಯಾಗಿದ್ದ ಸಂದರ್ಭದಲ್ಲಿ ಕುಟುಂಬದಿಂದ ದೂರವಾಗಿದ್ದರು.

ಬಳಿಕ ಅನಾಥ ಮಗು ಎಂದು ತಿಳಿದಿದ್ದ ಕೆಲವರು, ಸರ್ಕಾರಿ ಶಿಶುಗೃಹ ಸೇರಿಸಿದ್ದಾರೆ. ಬಳಿಗ ಬೆಂಗಳೂರಿನಲ್ಲಿನ ಬಸವನಗುಡಿಯ ಮಾತೃಛಾಯಾ ಶಿಶುವಿಹಾರಕ್ಕೆ ಕಳುಹಿಸಿದ್ದಾರೆ. 1990ರಲ್ಲಿ ಸ್ವೀಡನ್ ದಂಪತಿಗಳು ಬಾಲಕಿಯನ್ನು ದತ್ತು ಪಡೆದುಕೊಂಡು ಸ್ವೀಡನ್’ಗೆ ಕರೆದುಕೊಂಡು ಹೋಗಿದ್ದಾರೆ.

ಕಳೆದ 5 ವರ್ಷಗಳಿಂದ ಸೋನು ಅವರು ಹೆತ್ತವರಿಗಾಗಿ ಕರ್ನಾಟಕದಲ್ಲಿ ಹುಡುಕಾಟ ನಡೆಸುತ್ತಲೇ ಇದ್ದಾರೆ. ಹೆತ್ತವರಿಗಾಗಿ ನಾಲ್ಕು ವರ್ಷದ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಹಾಯ ಮಾಡುವಂತೆ ಕೇಳಿದ್ದಾರೆ. ಅಲ್ಲದೆ, ರಾಜ್ಯದ ಟಿವಿ ಮಾಧ್ಯಮಗಳನ್ನು ಸಂಪರ್ಕಿಸಿ ತಮ್ಮ ಸುದ್ದಿಯನ್ನು ಹಾಕುವಂತೆ ಯತ್ನಿಸಿದ್ದಾರೆ.

ಈ ವಿಚಾರ ತಿಳಿದ ಸೋನು ಅವರ ತಾಯಿ ಹಾಗೂ ಸಹೋದರಿ ಎರಡು ತಿಂಗಳ ಹಿಂದೆ ಟಿವಿ ಮಾಧ್ಯಮಗಳನ್ನು ಸಂಪರ್ಕಿಸಿ ಸೋನು ಅವರನ್ನು ಸಂಪರ್ಕಿಸಲು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಜ.15 ರಂದು ಸೋನು ಅವರು ಬೆಂಗಳೂರಿಗೆ ಬಂದಿದ್ದಾರೆ. ಇದರಂತೆ 30 ವರ್ಷಗಳ ಬಳಿ ಕೊನೆಗೂ ತಮ್ಮ ಪೋಷಕರನ್ನು ಭೇಟಿ ಮಾಡಿದ್ದಾರೆ.

ಸೋನು ಅವರ ನಿಜವಾದ ಹೆಸರು ಅರುಣಾಕುಮಾರಿಯಾಗಿದ್ದು, ಯಾವುದೇ ರೀತಿಯ ಸಂಶಯಗಳು ಮೂಡಬಾರದು ಎಂಬ ಕಾರಣಕ್ಕೆ ಸೋನು ಡಿಎನ್ಎ ಪರೀಕ್ಷೆಗೆ ಮಾಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿರುವ ಸೋನು ಅವರ ಸಹೋದರಿ ಸ್ವಪ್ನ ಬಿಲ್ಲಾ ಅವರು ಪ್ರತಿಕ್ರಿಯೆ ನೀಡಿ, ಆಟವಾಡುವ ಸಲುವಾಗಿ ಸಹೋದರಿ ಸಂಬಂಧಿಕರ ಮನೆಗೆ ಹೋಗಿದ್ದಳು. ಬಳಿಕ ಮನೆಗೆ ಹಿಂದಿರುಗಿರಲಿಲ್ಲ ಎಂದು ಹೇಳಿದ್ದಾರೆ. ಸೋನು ಅವರು ಸ್ವೀಡನ್ ನಲ್ಲಿ ತಮ್ಮ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ನೆಲೆಸಿದ್ದಾರೆ.

Comments are closed.