ಕರ್ನಾಟಕ

ಪ್ರೀತಿಸಿ ವಂಚಿಸಿದ ಯುವಕನಿಗೆ ಆ್ಯಸಿಡ್ ಎರಚಿದ ಯುವತಿ

Pinterest LinkedIn Tumblr


ತುಮಕೂರು: ಪ್ರೀತಿಸಿ ವಂಚಿಸಿದ ಯುವಕನ ಮೇಲೆ ಯುವತಿಯೊಬ್ಬಳು ಆ್ಯಸಿಡ್ ಎರಚಿದ ಘಟನೆ ತುಮಕೂರಿನ ಗುಬ್ಬಿ ತಾಲೂಕು ಪಂಚಾಯಿತಿಯಲ್ಲಿ ನಡೆದಿದೆ.

ತಾಲೂಕು ಪಂಚಾಯಿತಿಯಲ್ಲಿ ಎಸ್​ಡಿಎ ಆಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಮೇಲೆ ಗೌರಮ್ಮ ಎಂಬ ಯುವತಿಯಿಂದ ದಾಳಿ ನಡೆದಿದೆ. ಬುರ್ಕಾ ಧರಿಸಿಕೊಂಡು ಬಂದ ಗೌರಮ್ಮ ನೇರವಾಗಿ ಕಚೇರಿ ಒಳಗೆ ನುಗ್ಗಿ ಈ ಕೃತ್ಯ ಎಸಗಿದ್ದಾಳೆ.

ಅದೃಷ್ಟವಶಾತ್ ಮಂಜುನಾಥನಿಗೆ ಯಾವುದೇ ತೊಂದರೆಯಾಗಿಲ್ಲ. ಮಂಜುನಾಥ್ ಕೂಗಿಕೊಳ್ಳುತ್ತಿದ್ದಂತೆ ಯುವತಿ ಪರಾರಿಯಾಗಿದ್ದಾಳೆ. ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯ ಯುವತಿ ಗೌರಮ್ಮ ಹಾಗೂ ಮಂಜುನಾಥ್ ಪ್ರಿತಿಸುತ್ತಾ ಇದ್ದರು ಎನ್ನಲಾಗಿದೆ.

ಸರ್ಕಾರಿ ನೌಕರಿ ಸಿಕ್ಕಮೇಲೆ ಮಂಜುನಾಥ್ ಗೌರಮ್ಮಳನ್ನು ತಿರಸ್ಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಆ್ಯಸಿಡ್ ಎರಚಿ ಪ್ರತಿಕಾರ ತಿರೀಸಿಕೊಳ್ಳಲು ಮುಂದಾಗಿದ್ದಾಳೆ. ಈ ಬಗ್ಗೆ ಗುಬ್ಬಿ ಠಾಣೆಯಲ್ಲಿ ಯುವತಿ ವಿರುದ್ಧ ದೂರು‌ ದಾಖಲಾಗಿದೆ.

Comments are closed.