ಕರ್ನಾಟಕ

ದಿನಕ್ಕೆ 5 ತರಹದ ಡ್ರೆಸ್ ಹಾಕುವ ಮೋದಿ ರೈತರ ಕೈ ಹಿಡಿಯುವುದಿಲ್ಲ: ಅಯಪ್ಪ

Pinterest LinkedIn Tumblr


ಬಾಗಲಕೋಟ: ದಿನಕ್ಕೆ ಐದು ತರಹದ ಡ್ರೆಸ್ ಹಾಕುವ ಪ್ರಧಾನಿ ನರೇಂದ್ರ ಮೋದಿ ರೈತರ ಕೈ ಹಿಡಿಯವುಯುದಿಲ್ಲ ಎಂದು ಜನಸಮಾನ್ಯರ ಪಕ್ಷದ ಅಧ್ಯಕ್ಷ ಡಾ. ಅಯಪ್ಪ ಹೇಳಿದರು.

ಜಿಲ್ಲೆಯ ಕುಡಲಸಂಗಮದಲ್ಲಿ ಮಹದಾಯಿ ಹೋರಾಟಗಾರರ ನೂತನ ‘ಜನಸಮಾನ್ಯರ ಪಕ್ಷ’ ಚಾಲನೆ ನೀಡಲಾಯಿತು. ಬಳಿಕ ಸಮಾರಂಭದಲ್ಲಿ ಮಾತನಾಡಿದ ಅಯ್ಯಪ್ಪ, ಪ್ರಧಾನಿ ಮೋದಿ ಭಾಷಣ ಮಾಡುವ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಕೇವಲ ಯುದ್ಧದ ಬಗ್ಗೆ ಮಾತನಾಡುತ್ತಾರೆ ಎಂದು ಗುಡುಗಿದ ಅವರು, ‘ನಿಮಗೆ ಯುದ್ಧ ಬೇಕಾ?…ಅನ್ನ ಬೇಕಾ?’,ಎಂದು ಜನಸಾಮಾನ್ಯರನ್ನು ಪ್ರಶ್ನಿಸಿದರು.

‘ಜನಸಾಮಾನ್ಯರ ಪಕ್ಷದಿಂದ 20 ಕೋಟಿ ರೂಪಾಯಿ ಖರ್ಚು ಮಾಡಲು ಸಿದ್ಧರಿದ್ದೇವೆ. ಶ್ರಮದಾನದ ಮೂಲಕ ಕೆಲಸ ಮಾಡುತ್ತೇವೆ. ಕಳಸಾ ಬಂಡೂರಿ ನಾಲಾ ಕಾಮಕಾರಿಗೆ ಅನುಮತಿ ನೀಡಿ. ಕೇವಲ ಒಂದು ತಿಂಗಳಲ್ಲಿ ಕಾಮಗಾರಿ ಮಾಡಿ ಮುಗಿಸುತ್ತೇವೆ’ ಎಂದು ಕೇಂದ್ರಕ್ಕೆ ಸವಾಲ್ ಎಸೆದರು.

ಆರ್‌ಎಸ್‌ಎಸ್ ನಿರುದ್ಯೋಗಿಗಳ ಸಂಘ

ಆರ್‌ಎಸ್‌ಎಸ್ ನಿರುದ್ಯೋಗಿಗಳ ಸಂಘ. ಪ್ರಧಾನಿ ನಿರುದ್ಯೋಗಿ ಸಂಘದ ಸದಸ್ಯ. ಕೇವಲ ಭಾಷಣದ ಬಗ್ಗೆ ಯೋಚಿಸುತ್ತಾರೆ ಎಂದು ಡಾ. ಅಯಪ್ಪ ಆರೋಪಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿವೆ. ಶ್ರೀಘ್ರದಲ್ಲಿಯೇ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.

Comments are closed.