ಕರ್ನಾಟಕ

‘ಕನ್ನಡಿಗರು ಹರಾಮಿಗಳು’: ಮಹದಾಯಿ ವಿಷಯದಲ್ಲಿ ಕಿಚ್ಚು ಹಚ್ಚುವ ಹೇಳಿಕೆ ನೀಡಿದ ಗೋವಾ ಸಚಿವ

Pinterest LinkedIn Tumblr

ಪಣಜಿ: ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ, ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೆಕರ್ ಅವರು ಕನ್ನಡಿಗರನ್ನು ಹರಾಮಿಗಳು ಎಂದು ಜರೆದಿದ್ದಾರೆ. ಈ ಮೂಲಕ ಮಹದಾಯಿ ವಿಷಯದಲ್ಲಿ ಕಿಚ್ಚು ಹಚ್ಚುವ ಕೆಲಸ ಮಾಡಿದ್ದಾರೆ.

ಮಹದಾಯಿ ನದಿ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಣಕುಂಬಿ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಳಸಾ ಬಂಡೂರಿ ನಾಲೆ ಕಾಮಗಾರಿ ಪರಿಶೀಲಿಸಿ ಪಣಜಿಗೆ ತೆರಳಿದ ವಿನೋದ್ ಪಾಲೆಕರ್, ಕನ್ನಡಿಗರನ್ನು ಅವಮಾನ ಮಾಡುವ ರೀತಿಯ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಮಾನವೀಯ ಆಧಾರದಲ್ಲಿ ಕುಡಿಯುವ ನೀರು ಹಂಚಿಕೆ ಚರ್ಚೆಗೆ ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪತ್ರ ಬರೆದ ಮೇಲೂ ಕರ್ನಾಟಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಗೋವಾಕ್ಕೆ ಸೇರಬೇಕಾದ ನೀರನ್ನು ತಡೆಯುವ ಮೂಲಕ ಕರ್ನಾಟಕದ ಕಡೆ ತಿರುಗಿಸಲಾಗಿದೆ. ಇವುಗಳನ್ನು ಫೋಟೊ ಸಮೇತ ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತೇನೆ. ಕರ್ನಾಟಕದವರು ಏನು ಬೇಕಾದರೂ ಮಾಡಬಹುದು ಎನ್ನುವ ಹೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕಣಕುಂಬಿಗೆ ಭೇಟಿ ನೀಡಿದ್ದರು.

Comments are closed.