ಕರ್ನಾಟಕ

ಮುಖ್ಯಮಂತ್ರಿಯಿಂದ ಸೆಲ್ಫಿಗಾಗಿ ಮಹಿಳೆಯರ ಗುಂಪಿಗೆ ನೆರವು: ಪರ-ವಿರೋಧ ಚರ್ಚೆ

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರ ಗುಂಪಿನ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ವೀಡಿಯೋವನ್ನು ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್‌ ಮಾಡುವ ಮೂಲಕ ವ್ಯಂಗ್ಯವಾಡಿದ್ದು, ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ.

‘ಬಹಿರಂಗ ಸಭೆಗಳಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯರನ್ನು ಮುಟ್ಟುವುದನ್ನು ನಿಲ್ಲಿಸಬಾರದೇ? ಎಂದು ಪ್ರಶ್ನಿಸಿ ಮಾಳವೀಯ ಅವರು ವೀಡಿಯೋ ಟ್ವೀಟ್ ಮಾಡಿದ್ದರು.

ಕೆಲವು ನೆಟ್ಟಿಗರು ಪ್ರಧಾನಿ ಮೋದಿಯವರು ಮಹಿಳೆಯರ ಜೊತೆ ಇರುವ ಫೋಟೋಗಳನ್ನು ಹಾಕುವ ಮೂಲಕ ತಿರುಗಿ ಬಿದ್ದಿದ್ದರೆ, ಇನ್ನೂ ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯರ ಕೆಲವು ಫೋಟೋಗಳನ್ನು ಹಾಕಿ ಮಾಳವೀಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಶಿವಮೊಗ್ಗದ ಸಾಗರದಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯುವತಿಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸಿದ್ದರಾಮಯ್ಯನವರು ಯುವತಿಯ ತೋಳು ಹಿಡಿದು ಹತ್ತಿರಕ್ಕೆ ಎಳೆದಿರುವ ವೀಡಿಯೋವನ್ನು ಮಾಳವೀಯ ಟ್ವೀಟ್ ಮಾಡಿದ್ದರು.

Comments are closed.