ಕರ್ನಾಟಕ

ಕುಡಿದ ಆಮಲಿನಲ್ಲಿ ಸಾರಿಗೆ ಇಲಾಖೆ ಬಸ್ಸಿಗೆ ಬೆಂಕಿಯಿಟ್ಟ ವ್ಯಕ್ತಿ

Pinterest LinkedIn Tumblr


ಕೋಲಾರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಸಾರಿಗೆ ಬಸ್‍ಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದಾದಿರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸ್ಸಿಗೆ ಪೆಟ್ರೋಲ್ ಸುರಿದು ಚಲಪತಿ ಎಂಬಾತ ಕುಡಿದ ಅಮಲಿನಲ್ಲಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಶ್ರೀನಿವಾಸಪುರದ ಕೆಎಸ್‍ಆರ್ ಟಿಸಿ ಡಿಪೋಗೆ ಸೇರಿದ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಬಸ್ ಗೆ ಬೆಂಕಿ ಹಚ್ಚಿದ ಚಲಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದೃಷ್ಟವಶಾತ್ ಬಸ್ ನಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯಾವುದೇ ದುರಂತ ಸಂಭವಿಸಿಲ್ಲ.

Comments are closed.