ಕರ್ನಾಟಕ

ಡಿಸೆಂಬರ್‌ 12: ಹುಬ್ಬಳ್ಳಿ ವಿಮಾನ ಟರ್ಮಿನಲ್‌ ಲೋಕಾರ್ಪಣೆ

Pinterest LinkedIn Tumblr


ಹುಬ್ಬಳ್ಳಿ: ಬರೋಬ್ಬರಿ ಹನ್ನೊಂದು ವರ್ಷಗಳ ಬಳಿಕ ನೂತನ ಹುಬ್ಬಳ್ಳಿ ವಿಮಾನ ಟರ್ಮಿನಲ್ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.

ಕೇಂದ್ರ ವಿಮಾನಯಾನ ಸಚಿವ ಗಜಪತಿ ರಾಜು ಹಾಗು ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಉದ್ಘಾಟಿಸುವರು.

ಮುಂಬಯಿ -ಹುಬ್ಬಳ್ಳಿ -ಬೆಂಗಳೂರು ಮಧ್ಯೆ ನೂತನ ಯಾನ ಕೂಡ 12 ರಂದು ಅರಂಭಗೊಳ್ಳಲಿದೆ.

391 ಏರ್ ಬಸ್ ಮಂಗಳವಾರ, ಬುಧವಾರ ಹಾಗು ಶನಿವಾರ ಸಂಚರಿಸಲಿದೆ. 12ಕ್ಕೆ ಬೆಂಗಳೂರು ಬಿಟ್ಟು 12.50 ಹುಬ್ಬಳ್ಳಿ ತಲುಪಲಿದೆ. 1.25ಕ್ಕೆ ಹುಬ್ಬಳ್ಳಿ ಬಿಟ್ಟು 2.30ಕ್ಕೆ ಮುಂಬಯಿ ತಲುಪಲಿದೆ.

ಇದೇ ವಿಮಾನ ಮರಳಿ 3.25ಕ್ಕೆ ಮುಂಬಯಿ ಬಿಟ್ಟು 4.35ಕ್ಕೆ ಹುಬ್ಬಳ್ಳಿ ತಲುಪಲಿದೆ. ಬಳಿಕ 6.10ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 7.30ಕ್ಕೆ ಬೆಂಗಳೂರು ತಲುಪಲಿದೆ.

Comments are closed.