ಕರ್ನಾಟಕ

ಕಾಣೆಯಾಗಿದ್ದ ಕಿವಿ ಕೇಳದ, ಮಾತು ಬಾರದ 6 ವರ್ಷದ ಬಾಲಕನನ್ನು ಪೋಷಕರ ಮಡಿಲು ಸೇರಿಸಿದ ಆಟೋ ಚಾಲಕ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಲಿಂಗರಾಜಪುರಂ ನಿಂದ ಕಾಣೆಯಾಗಿದ್ದ ಕಿವಿ ಕೇಳದ ಹಾಗೂ ಮಾತು ಬಾರದ ಆರು ವರ್ಷದ ಬಾಲಕನನ್ನು ಪೊಲೀಸರು ಪತ್ತೆಹಚ್ಚುಲು ಆಟೋ ಚಾಲಕರೊಬ್ಬರು ಸಹಾಯ ಮಾಡಿದ್ದಾರೆ.

ಕೊಪ್ಪಳ ಮೂಲದ ವರುಣ್ ಕಾಣೆಯಾಗಿದ್ದ ಬಾಲಕ. ಇತ ಲಿಂಗರಾಜಪುರಂನಲ್ಲಿ ತನ್ನ ಶಿಕ್ಷಕಿ ಸುಶೀಲಾ ಜೋಸೆಫ್ ಜತೆ ವಾಸವಾಗಿದ್ದರು. ಸೋಮವಾರ ಮಧ್ಯಾಹ್ನ ಸುಶೀಲಾ ಅವರು ನಿದ್ರೆಗೆ ಜಾರಿದ್ದಾಗ ವರುಣ್ ಮನೆಯಿಂದ ಹೊರಬಂದಿದ್ದ. ನಿದ್ರೆಯಿಂದ ಎದ್ದು ಸುಶೀಲಾ ಅವರು ವರುಣ್ ನನ್ನು ಹುಡುಕಿದ್ದಾರೆ. ಆದರೆ ಆತನ ಎಲ್ಲೂ ಕಾಣದೆ ಇದ್ದಿದ್ದರಿಂದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಹೆಣ್ಣೂರು ಪೊಲೀಸರು ಇತರ ಪೊಲೀಸ್ ಠಾಣೆಗಳಿಗೆ ನಾಪತ್ತೆ ಕುರಿತು ಮಾಹಿತಿ ನೀಡಿದ್ದರು.

ನೆಲಮಂಗಲದಲ್ಲಿ ಅಲೆದಾಡುತ್ತಿದ್ದ ಬಾಲಕನನ್ನು ಕಂಡ ಆಟೋ ಡ್ರೈವರ್ ಆತನನ್ನು ನೆಲಮಂಗಲದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದಾಗ ಹೆಣ್ಣೂರಿನಿಂದ ಬಾಲಕನೊಬ್ಬ ನಾಪತ್ತೆಯಾಗಿರುವುದು ತಿಳಿದ ಪೊಲೀಸರು ಠಾಣೆಗೆ ಕರೆ ಮಾಡಿದ್ದಾರೆ. ಕೂಡಲೇ ಹೆಣ್ಣೂರು ಪೊಲೀಸರು ಸುಶೀಲಾ ಅವರಿಗೆ ಕರೆ ಮಾಡಿ ಆತನನ್ನು ವಿವರಗಳನ್ನು ನೀಡಿದ್ದು ಅವರ ಮನೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋ ಚಾಲಕನ ಸಮಯಪ್ರಜ್ಞೆಯಿಂದ ಕಾಣಿಯಾಗಿದ್ದ ಬಾಲಕನೊಬ್ಬ ಪೋಷಕರ ಮಡಿಲು ಸೇರಿದ್ದಾನೆ.

Comments are closed.