ಕರ್ನಾಟಕ

ಹುಡುಗಿ ವಿಚಾರದ ಜಗಳ- ಹಳೆ ಗೆಳೆಯನಿಂದ ಯುವಕನ ಕೊಲೆ

Pinterest LinkedIn Tumblr
USA, New York State, New York City, Crime scene barrier tape

ಬೆಂಗಳೂರು: ಹುಡುಗಿ ವಿಚಾರದಲ್ಲಿ ಹಿಂದೆ ನಡೆದಿದ್ದ ಜಗಳ ಕೊನೆಗೆ ಯುವಕನ ಪ್ರಾಣವನ್ನೇ ಪಡೆದಿದೆ. ಹುಡುಗಿ ವಿಚಾರದಲ್ಲಿ ಹೊಡೆತ ತಿಂದಿದ್ದ ಯುವಕ ಹೊಡೆದವನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.

ಯುವಕ ಹೇಮಂತ ಕೊಲೆಗೀಡಾಗಿದ್ದು, ಹಳೆ ಗೆಳೆಯ ಮಧು ಕೊಲೆ ಮಾಡಿದ್ದಾನೆ. ಹೇಮಂತ ಗೆಳೆಯರ ಜೊತೆ ಪಾರ್ಟಿ ಮಾಡಿ ಮನೆಕಡೆ ಹೊರಟಿದ್ದಾಗ ಎದುರಾದ ಹಳೆ ಗೆಳೆಯ ಮಧು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ.

ಈ ಹಿಂದೆ ಹುಡುಗಿ ವಿಚಾರದಲ್ಲಿ ಹೇಮಂತ ಮಧುನನ್ನು ಹೊಡೆದಿದ್ದ ಎನ್ನಲಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಅವಕಾಶಕ್ಕಾಗಿ ಕಾದು ಒಂಟಿಯಾಗಿ ಸಿಕ್ಕಿದ್ದ ಅವಕಾಶವನ್ನು ಬಳಕೆ ಮಾಡಿಕೊಂಡು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಒಂದು ಘಂಟೆಯೊಳಗೆ ಬಂಧನ ಮಾಡಿದ್ದಾರೆ.

Comments are closed.