ಕರ್ನಾಟಕ

ಎರಡುವರೆ ವರ್ಷ ರೇಪ್ ಎಸಗಿ, ವಿಡಿಯೋ ಮಾಡಿ, ಇದೀಗ ಹತ್ಯೆ ಬೆದರಿಕೆ: ಯುವತಿ ಅಳಲು

Pinterest LinkedIn Tumblr


ಬೆಂಗಳೂರು: ಕಳೆದ ಎರಡುವರೆ ವರ್ಷಗಳಿಂದ ಹಿರಿಯ ಅಧಿಕಾರಿಗಳು ನನ್ನ ಮೇಲೆ ಅತ್ಯಾಚಾರವೆಸಗಿ ಅದರ ಅಶ್ಲೀಲ ವಿಡಿಯೋ ಮಾಡಿ ಇದೀಗ ಹತ್ಯೆಯ ಬೆದರಿಕೆ ಹಾಕುತ್ತಿದ್ದಾರೆ ಎಂದು ದೆಹಲಿ ಅಭಿವೃದ್ಧಿ ಪ್ರಾಧೀಕಾರ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಿಳೆ ಎರಡು ವರ್ಷಗಳ ಕಾಲ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ರಾಸಲೀಲೆಯ ವೀಡಿಯೊಗಳನ್ನು ಕೂಡ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.

ಆರೋಪಿಗಳು ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದ್ದಲ್ಲದೇ ಹಿಂಬಾಕಿ ಕೂಡಾ ಪಾವತಿ ಮಾಡುತ್ತಿಲ್ಲ. ದೆಹಲಿ ಅಭಿವೃದ್ಧಿ ಪ್ರಾಧೀಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, ಮಹಿಳೆಗೆ 2014 ರಲ್ಲಿ ಪತಿ ಮರಣದ ನಂತರ ಡಿಡಿಎಯಲ್ಲಿ ಉದ್ಯೋಗ ನೀಡಲಾಗಿದೆ.
ಮಹಿಳೆ ನೀಡಿದ ದೂರನ್ನು ಸ್ವೀಕರಿಸಿದ್ದು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಉಪ ಪೊಲೀಸ್ ಆಯುಕ್ತ ರೋಮಿಲ್ ಬಾನಿಯಾ ತಿಳಿಸಿದ್ದಾರೆ.

Comments are closed.