ಕರ್ನಾಟಕ

ಬಾಡೂಟಕ್ಕಾಗಿ ಹೆದ್ದಾರಿಯನ್ನೇ ಬಂದ್ ಮಾಡಿದ ಶಾಸಕ

Pinterest LinkedIn Tumblr


ಕೋಲಾರ: ಬಾಡೂಟ ಆಯೋಜನೆಗಾಗಿ ಹೆದ್ದಾರಿ ರಸ್ತೆಯನ್ನೇ ಬಂದ್ ಮಾಡಿ ಶಾಸಕ ವರ್ತೂರ್ ಪ್ರಕಾಶ್ ವಿರುದ್ಧ ಜಿಲ್ಲಾಧಿಕಾರಿ ಕ್ರಮಕ್ಕೆ ಮುಂದಾಗಿದ್ದಾರೆ.
ಶಾಸಕ ವರ್ತೂರ್ ಪ್ರಕಾಶ್, ತಮ್ಮ ಬೆಂಬಲಿಗರಿಗೆ ಬಾಡೂಟ ಆಯೋಜಿಸಲು ಹೆದ್ದಾರಿಯನ್ನು ಬಂದ್ ಮಾಡಿ ಪೆಂಡಾಲ್‌ಗಳನ್ನು ಹಾಕಿದ್ದರು. ಇದರ ಬಗ್ಗೆ ಮಾಧ್ಯಮಗಳು ಬಿತ್ತರಿಸಿದ ಸುದ್ದಿಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಕೂಡಲೇ ತಡೆಯನ್ನು ತೆರುವುಗೊಳಿಸುವಂತೆ ಆಧೀನ ಆಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಹೆದ್ದಾರಿ ರಸ್ತೆಗೆ ತಡೆಯೊಡ್ಡಿದ ಶಾಸಕ ವರ್ತೂರ್ ವಿರುದ್ದ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನಪ್ರತಿನಿಧಿಯೊಬ್ಬ ಬಾಡೂಟಕ್ಕಾಗಿ ಹೆದ್ದಾರಿಯನ್ನೇ ಬಂದ್ ಮಾಡಿರುವ ಕೃತ್ಯ ವಿಪಕ್ಷಗಳು ಕೆರಳುವಂತೆ ಮಾಡಿದೆ.

Comments are closed.