ಶಿವಮೊಗ್ಗ: ಇಲ್ಲಿನ ಆಯನೂರಿನ ಕೋಟೆ ಗ್ರಾಮದಲ್ಲಿ ನಿಷೇಧದ ನಡುವೆಯೂ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗಿದ್ದು, ಹೋರಿಯೊಂದು ತಿವಿದು ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಅವಘಡ ಸೋಮವಾರ ನಡೆದಿದೆ.
ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಹೋರಿಯೊಂದು ಸಿಟ್ಟಿಗೆದ್ದು ಏಕಾಏಕಿ ವೀಕ್ಷಕರ ಸಾಲಿನಲ್ಲಿ ನಿಂತಿದ್ದ ಬಾಳೆಕೊಪ್ಪದ ಚಂದ್ರಶೇಖರ್ (40)ಅವರತ್ತ ನುಗ್ಗಿ ಬಲವಾಗಿ ತಿವಿದಿದೆ. ದಾಳಿಗೆ ಚಂದ್ರಶೇಖರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಅದಾಗಲೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಕುಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
-ಉದಯವಾಣಿ