ಕರ್ನಾಟಕ

ಅಪರಿಚಿತನ ಶವದ ಮೇಲೆಯೇ ಹರಿದ ನೂರಾರು ವಾಹನ!

Pinterest LinkedIn Tumblr


ಬೆಂಗಳೂರು: ನಗರದ ಮಡಿವಾಳದ ಬಳಿ ಇರುವ ಬಿ ಎಟಿಪಿಎಲ್‌ ಎಲಿವೇಟೇಡ್‌ ಫ್ಲೈಓವರ್‌ನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವದ ಮೇಲೆ ನೂರಾರು ವಾಹನಗಳು ಸಂಚರಿಸಿವೆ.

ಶನಿವಾರ ನಸುಕಿನ 3 ಗಂಟೆಯ ವೇಳೆಗೆ ಅಪರಿಚಿತವಾಹನ ಢಿಕ್ಕಿಯಾಗಿ ಪರಾರಿಯಾಗಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಯಾರ ಗಮನಕ್ಕೂ ಬಂದಿಲ್ಲ. ಶವದ ಮೇಲೆಯೇ ನೂರಾರು ವಾಹನಗಳು ಸಂಚರಿಸಿ ಛಿದ್ರ ಛಿದ್ರವಾಗಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಅಂಬುಲೆನ್ಸ್‌ನಲ್ಲಿ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಮಡಿವಾಳ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

-ಉದಯವಾಣಿ

Comments are closed.