ಕರ್ನಾಟಕ

40 ವರ್ಷದ ಮುಖ್ಯಶಿಕ್ಷಕಿಯೊಂದಿಗೆ 21 ವರ್ಷದ ಹುಡುಗನ ಲವ್ ! ಮುಂದೆ ಹುಡುಗ ಮಾಡಿದ್ದೇನು..?

Pinterest LinkedIn Tumblr

ಬೆಂಗಳೂರು: ತನ್ನ ಪ್ರೀತಿಯನ್ನು ಖಾಸಗಿ ಶಾಲೆಯ 40 ವರ್ಷದ ಮುಖ್ಯಶಿಕ್ಷಕಿ ತಿರಸ್ಕರಿಸಿದ್ದಕ್ಕೆ ಕುಪಿತನಾದ ಶಾಲಾ ನೌಕರ ಕೈ ನರ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಯಿ ವಯಸ್ಸಿನ ಆಕೆಯನ್ನೇ ಮದುವೆಯಾಗಬೇಕೆಂದು ಬೆನ್ನುಬಿದ್ದಿದ್ದಾನೆ.

ಜೆ.ಪಿ. ನಗರದ ತರುಣ್ (21) ಆತ್ಮಹತ್ಯೆಗೆ ಯತ್ನಿಸಿದ ಯುವಕ. ತಂದೆ-ತಾಯಿ ಇಲ್ಲದ ತರುಣ್, ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದು, ಜೀವನ ನಿರ್ವಹಣೆಗಾಗಿ ಜೆ.ಪಿ ನಗರದ ಖಾಸಗಿ ಶಾಲೆಯಲ್ಲಿ ಸ್ವಾಗತಗಾರನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಶಾಲೆಯ ಮುಖ್ಯಶಿಕ್ಷಕಿಯೊಂದಿಗೆ ಸಲುಗೆ ಇತ್ತು. ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡು ಗಂಟೆಗಟ್ಟಲೆ ಸಂಭಾಷಣೆ ಹಾಗೂ ವ್ಯಾಟ್ಸ್​ಆಪ್​ನಲ್ಲಿ ಚಾಟ್ ಮಾಡುತ್ತಿದ್ದರು.

ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿ 4 ತಿಂಗಳು ಒಂದೇ ಮನೆಯಲ್ಲಿ ನೆಲೆಸಿದ್ದರು. ಈ ನಡುವೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಕಿತ್ತಾಟವಾಗಿತ್ತು. ಒಂದೂವರೆ ತಿಂಗಳಿಂದ ಮುಖ್ಯಶಿಕ್ಷಕಿ ತರುಣ್​ನಿಂದ ದೂರವಿದ್ದರು. ಇದರಿಂದ ತರುಣ್ ಖಿನ್ನತೆಗೊಳಗಾಗಿ ನಾಲ್ಕೈದು ಬಾರಿ ಕೈ ಕೊಯ್ದುಕೊಂಡು ಆಕೆಗೆ ಫೋಟೋಗಳನ್ನು ವ್ಯಾಟ್ಸ್​ಆಪ್​ನಲ್ಲಿ ಕಳಿಸಿದ್ದ. ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶಾಲಾ ಸಿಬ್ಬಂದಿಗೆ ವಿಷಯ ತಿಳಿದಿದ್ದರಿಂದ ಹಾಗೂ ತರುಣ್ ವರ್ತನೆಯಿಂದ ಬೇಸತ್ತ ಮುಖ್ಯಶಿಕ್ಷಕಿ ಶಾಲೆಗೆ ಬಂದಿಲ್ಲ. ಮತ್ತೊಂದೆಡೆ ತರುಣ್, ಆಕೆಯೇ ಬೇಕೆಂದು ಶಾಲೆಯಲ್ಲಿ ರಂಪಾಟ ಮಾಡಿದ್ದಾನೆ.

ತರುಣ್ ಮತ್ತು ಮುಖ್ಯಶಿಕ್ಷಕಿ ಲವ್ ಸ್ಟೋರಿ ಕೇಳಿದ ಆತನ ಸ್ನೇಹಿತರು ಹಾಗೂ ಆಪ್ತರು ಬೆಚ್ಚಿಬಿದ್ದಿದ್ದು, ಈ ವಿಷಯ ಶಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Comments are closed.