ಕರ್ನಾಟಕ

ಕಡ್ಲೆ ತಿಂದ ಇಲಿಗೆ ಚಿತ್ರ ಹಿಂಸೆ ನೀಡಿದ ಮೈಸೂರ್‌ ಅಂಗಡಿ ಮಾಲೀಕ!

Pinterest LinkedIn Tumblr


ಮೈಸೂರು: ಅಂಗಡಿ ಮಾಲೀಕನೊಬ್ಬ ಕಡ್ಲೆ ತಿಂದ ಇಲಿಯನ್ನು ಕಟ್ಟಿ ಹಾಕಿ ಬೆತ್ತದಿಂದ ಬಡಿಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು ಅಂಗಡಿ ಮಾಲೀಕನ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದೆ.

ದೈನಿಕವೊಂದರ ವರದಿ ಪ್ರಕಾರ ಈ ವೀಡಿಯೋವನ್ನು ಮೈಸೂರು ಮೂಲದ ಮೇಲಹಳ್ಳಿ ರಾಮಣ್ಣ ಎಂಬಾತ ಚಿತ್ರೀಕರಿಸಿದ್ದು, ಇದರಲ್ಲಿ ಕಡ್ಲೆ ಬೀಜ ತಿಂದ ಇಲಿಯನ್ನು ಬಾಟಲ್‌ವೊಂದಕ್ಕೆ ಕಟ್ಟಿಹಾಕಿ ಕೋಲಿನಿಂದ ಆತ ಮನಬಂದಂತೆ ಬಡಿಯುತ್ತಿದ್ದ. ಬಳಿಕ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾನೆ.

ಇದೀಗ ವೀಡಿಯೋ ರಾಷ್ಟ್ರಮಟ್ಟದಲ್ಲೇ ಸದ್ದು ಮಾಡಿದ್ದು, 32 ಸೆಕೆಂಡ್‌ಗಳ ಈ ವೀಡಿಯೋದಲ್ಲಿದ್ದ ಇಲಿ ರಾಮಣ್ಣನ ಅಂಗಡಿಯಲ್ಲಿ ಪ್ರತಿನಿತ್ಯ ಆಹಾರ ಧಾನ್ಯಗಳನ್ನು ತಿನ್ನುತ್ತಿತ್ತು. ಇದರಿಂದ ಬೇಸತ್ತ ರಾಮಣ್ಣ ಅಂತಿಮವಾಗಿ ಅದನ್ನು ಹಿಡಿದೇ ಬಿಟ್ಟಿದ್ದ. ಬಳಿಕ ಅದನ್ನು ಕಟ್ಟಿಹಾಕಿ ಕಡ್ಲೆ ಪ್ಯಾಕೇಟ್‌ ತಿನ್ನುತ್ತೀಯ, ಅಂತ ಮತ್ತೆ ಮತ್ತೆ ಪ್ರಶ್ನಿಸಿದ್ದಾನೆ. ಈ ವೇಳೆ ಇಲಿ ಒದ್ದಾಡಿ ನೆಲಕ್ಕೆ ಬಿದ್ದರೂ ಮತ್ತೆ ಎತ್ತಿ ಅದಕ್ಕೆ ಬಡಿದಿದ್ದಾನೆ. ಈತನೊಂದಿಗೆ ಸ್ನೇಹಿತರೂ ಕೂಡಾ ಇಲಿಯನ್ನು ನೋಡಿ ನಗುತ್ತಿರುವುದು ವೀಡಿಯೋದಲ್ಲಿ ಕಾಣಸಿಗುತ್ತದೆ.

Comments are closed.