ಕರ್ನಾಟಕ

ಶಾಸಕ ಆನಂದ್ ಸಿಂಗ್ ಬಳಿ ದುಬಾರಿ ಕಾರಿಗಾಗಿ ಬೇಡಿಕೆಯಿಟ್ಟ ಯುವಕರ ತಂಡ ಏನು ಮಾಡಿದೆ ಗೊತ್ತೇ..?

Pinterest LinkedIn Tumblr

ಬಳ್ಳಾರಿ: ತಾನು ಕೇಂದ್ರ ಸಚಿವರ ಪುತ್ರನೆಂದು ಹೇಳಿಕೊಂಡು ಬಳ್ಳಾರಿಯ ವಿಜಯ ನಗರ ಶಾಸಕ ಆನಂದ್ ಸಿಂಗ್ ಬಳಿ ದುಬಾರಿ ಕಾರಿಗಾಗಿ ಬೇಡಿಕೆಯಿಟ್ಟಿದ್ದ ಆಂಧ್ರಪ್ರದೇಶ ಮೂಲದ ಆರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಶಾಸಕ ಆನಂದ್ ಸಿಂಗ್ ದೂರಿನ ಮೇರೆಗೆ ಕೇಂದ್ರ ಸಚಿವ ಅಶೋಕ್ ಗಜಪತಿ ಬಾಬು ಅವರ ಪುತ್ರನೆಂದು ಹೇಳಿಕೊಂಡಿದ್ದ ರಾಜ್ ವೀರ್ ಬಹದ್ದೂರ್ ಮತ್ತು ಆತನ ಐವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ಮಗನೆಂದು ಹೇಳಿಕೊಂಡು ಶಾಸಕ ಆನಂದ್ ಸಿಂಗ್ ಅವರಿಗೆ ಕರೆ ಮಾಡಿ, ತಾನು ಹಂಪಿ ನೋಡಲು ಬರುತ್ತಿದ್ದು, ಅದಕ್ಕಾಗಿ ವ್ಯವಸ್ಥೆ ಮಾಡುವಂತೆ ಹೇಳಿದ್ದ, ಅದರಂತೆ ಶಾಸಕರು ಆತನಿಗಾಗಿ ಐಷಾರಾಮಿ ರೇಂಜ್ ರೋವರ್ ಎಸ್ ಯುವಿ ಕಾರನ್ನು ಪ್ರವಾಸಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹಂಪಿಯಿಂದ ವಾಪಾಸಾದ ನಂತರ ರಾಜ್ ವೀರ್ ಬಹದ್ದೂರ್ ಕಾರನ್ನು ತನಗೆ ಉಡುಗೊರೆಯಾಗಿ ನೀಡುವಂತೆ ಬೇಡಿಕೆಯಿಟ್ಟಿದ್ದ, ಇದರಿಂದ ಅನುಮಾನಗೊಂಡ ಆನಂದ್ ಸಿಂಗ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದಕ್ಕೂ ಮೊದಲು ಆತನ ಸಿಂಧನೂರು ಶಾಸಕ ಹಂಪನಗೌಡ ಬರದಾಳಿ ಅವರ ಬಳಿ ತೆರಳಿ ತಾನು ಆಂಧ್ರಪ್ರದೇಶ ಉಪಮುಖ್ಯಮಂತ್ರಿಗಳ ಮದನೆಂದು ಪರಿಚಯಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಭೂಮಿ ಖರೀದಿಗಾಗಿ ಸಿಂಧನೂರಿಗೆ ಆಗಮಿಸುತ್ತಿದ್ದು, ತನಗೆ ಹಂಪಿ ನೋಡುವ ಆಸೆಯಿದ್ದು ಅದಕ್ಕಾಗಿ ವ್ಯವಸ್ಥೆ ಮಾಡುವಂತೆ ಹೇಳಿದ್ದಾನೆ. ಹಂಪನಗೌಡ ಬರದಾಳಿ ಆನಂದ್ ಸಿಂಗ್ ಅವರ ಸೋದರಳಿಯನಿಗೆ ಕರೆ ಮಾಡಿ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪುತ್ರಹೊಸಪೇಟೆಗೆ ಆಗಮಿಸುತ್ತಿದ್ದು, ಅವರ ಪ್ರವಾಸಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಶಾಸಕರಿಗೆ ಬೆದರಿಕೆ
ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ನಿಂದಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಅಕ್ಟೋಬರ್ 17 ರಂದು ಶಾಸಕರ ಮನೆಗೆ ತಾನು ಕೆ.ಆರ್ ನಗರದ ಅಂಕನಹಳ್ಳಿ ಗ್ರಾಮದವನೆಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಶಾಸಕರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಮಹೇಶ್ ಮನೆಯಲ್ಲಿ ಕೆಲಸ ಮಾಡುವ ಅವಿನಾಶ್ ಎಂಬುವರು ತಿಳಿಸಿದ್ದಾರೆ.

Comments are closed.