ಕರ್ನಾಟಕ

ಜಿಎಸ್ಟಿ ಹೆಸರಲ್ಲಿ ಜನರಿಗೆ ವಂಚನೆ : ಜಿಎಸ್ಟಿ ಡೀಲರ್ ಹೌದೋ ಅಲ್ವೋ ತಿಳಿಯಲು ಹೊಸ ಮೊಬೈಲ್ ಆಯಪ್‌ ಬಿಡುಗಡೆ.

Pinterest LinkedIn Tumblr

ಜಿಎಸ್ಟಿ ಹೆಸರಲ್ಲಿ ಜನರಿಂದ ಹಣ ವಸೂಲಿ ಮಾಡೋದನ್ನು ತಡೆಯಲು ಕೇರಳ ಸರ್ಕಾರ ಮೊಬೈಲ್ ಆಯಪ್ ಒಂದನ್ನು ಬಿಡುಗಡೆ ಮಾಡಿದೆ. ಉದ್ಯಮಿ ಜಿಎಸ್ಟಿ ಡೀಲರ್ ಹೌದೋ ಅಲ್ವೋ ಅನ್ನೋದನ್ನು ಈ ಆಯಪ್ ಮೂಲಕ ಪತ್ತೆ ಮಾಡಬಹುದು.

ಜಿಎಸ್ಟಿಯೊಂದಿಗೆ ರಜಿಸ್ಟರ್ ಮಾಡಿಸಿಕೊಂಡಿರೋ ಡೀಲರ್ ಗಳು ತಮ್ಮ 15 ಡಿಜಿಟ್ ನ ಐಡಿ ನಂಬರ್ ನಮೂದಿಸಬೇಕಾಗುತ್ತದೆ. ನೀವು ಖರೀದಿಸಿರೋ ಉತ್ಪನ್ನದ ಮೇಲೆ ಎಷ್ಟು ಜಿಎಸ್ಟಿ ಶುಲ್ಕ ಅನ್ವಯವಾಗುತ್ತದೆ ಅನ್ನೋದನ್ನು ಕೂಡ ಜಿಎಸ್ಟಿ ಮೊಬೈಲ್ ಆಯಪ್ ನಲ್ಲಿ ಪರಿಶೀಲಿಸಬಹುದು.

ಸಣ್ಣ ವ್ಯಾಪಾರಿಗಳು ಕೂಡ ಸುಖಾಸುಮ್ಮನೆ ಜಿಎಸ್ಟಿ ಹೆಸರಲ್ಲಿ ಗ್ರಾಹಕರಿಂದ ವಸೂಲಿ ಮಾಡುತ್ತಿದ್ದು, ಅದನ್ನು ತಡೆಗಟ್ಟಲು ಈ ಆಯಪ್ ಸಹಕಾರಿಯಾಗಲಿದೆ. ಜಿಎಸ್ಟಿ ಜಾರಿ ಬಳಿಕ 600 ವಸ್ತುಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.

ಆದ್ರೆ ವ್ಯಾಪಾರಿಗಳು ಮಾತ್ರ ಕೇವಲ 169 ವಸ್ತುಗಳ ದರವನ್ನು ಕಡಿಮೆ ಮಾಡಿದ್ದು, ಉಳಿದ ಉತ್ಪನ್ನಗಳಿಗೆ ಹಳೆಯ ಜಿಎಸ್ಟಿಯನ್ನೇ ವಿಧಿಸುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಅಂಥ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.

Comments are closed.