ಕರ್ನಾಟಕ

ಪಟಾಕಿ: 90ಕ್ಕೇರಿದ ಗಾಯಾಳುಗಳ ಸಂಖ್ಯೆ

Pinterest LinkedIn Tumblr


ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಗಾಯಾಳುಗಳ ಸಂಖ್ಯೆ 90ಕ್ಕೇರಿದೆ. ಭಾನುವಾರವೂ ಪಟಾಕಿ ಸಿಡಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ನಡೆದಿವೆ. ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ಜಯನಗರದ ನೇತ್ರಧಾಮ, ಶಂಕರ ಕಣ್ಣಿನ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇದುವರೆಗೂ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಇಬ್ಬರು ದೃಷ್ಟಿ ಕಳೆದುಕೊಂಡಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಗಂಭೀರ ಚಿಕಿತ್ಸೆಗೆ ಒಳಗಾಗಿದ್ದವರ ಸಂಖ್ಯೆಯನ್ನು ಆಸ್ಪತ್ರೆ ವೈದ್ಯರು ಖಚಿತಪಡಿಸಿಲ್ಲ. ಕಳೆದ ವರ್ಷಕ್ಕಿಂತ ಪಟಾಕಿ ಅನಾಹುತಗಳಲ್ಲಿ ಗಾಯಗೊಂಡವರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಈ ಬಾರಿ ಹಲವು ಮಂದಿ ಪಟಾಕಿ ಹಚ್ಚುವಾಗ ಹಾಗೂ ನಿಂತು ನೋಡಿದವರೂ ಗಾಯಗೊಂಡಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ 23 ಮಂದಿ ಚಿಕಿತ್ಸೆಗೆ ಒಳಗಾಗಿದ್ದು, ಹಲವು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಹೊರರೋಗಿ ಚಿಕಿತ್ಸೆ ಘಟಕದಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಳಿದಂತೆ ನಾರಾಯಣ ನೇತ್ರಾಲಯದ 4 ಆಸ್ಪತ್ರೆ ಘಟಕಗಳಲ್ಲಿ ಭಾನುವಾರದ ಮಧ್ಯರಾತ್ರಿ ವೇಳೆ ಒಟ್ಟು 36 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಶಂಕರ, ಜಯನಗರ ನೇತ್ರಧಾಮ, ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

-ಉದಯವಾಣಿ

Comments are closed.