ಕರ್ನಾಟಕ

ದೇಶದಿಂದ 25 ಕೋಟಿ ಮುಸ್ಲಿಮರನ್ನು ಓಡಿಸ್ಬೇಕಾ? ಎಚ್‌ಡಿಡಿ

Pinterest LinkedIn Tumblr


ಬೆಂಗಳೂರು : ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಮಾಜಿ ಪ್ರಧಾನಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸರ್ಕಾರದ ಪರ ಬ್ಯಾಟ್‌ ಬೀಸಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ‘ಅನಂತ್‌ ಕುಮಾರ್‌ ಹೇಳಿಕೆಯೇ ಅಪ್ರಬುದ್ಧ. ಒಬ್ಬ ಕೇಂದ್ರ ಸಚಿವನಿಗೆ ಇಂತಹ ಧೋರಣೆ ಸರಿಯಲ್ಲ. ಮುಸ್ಲಿಮರನ್ನು ವಿರೋಧಿಸಿಯೇ ನಾನು ಸಚಿವನಾಗಿದ್ದೇನೆ ಎನ್ನುತ್ತಾರೆ. ಹಾಗಾದರೆ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಏನು ಹೇಳಿದ್ದರು’ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಮುಸ್ಲಿಮರನ್ನು ಬಿಡುವುದು ಅಷ್ಟು ಸುಲಭವಲ್ಲ. ದೇಶದಲ್ಲಿರುವ 25 ಕೋಟಿ ಮುಸ್ಲಿಮರನ್ನು ಓಡಿಸಬೇಕೆ ?’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

-ಉದಯವಾಣಿ

Comments are closed.