ಕರ್ನಾಟಕ

ಪತಿಯ ಅನಾರೋಗ್ಯ: ಮಕ್ಕಳನ್ನು ಸಂಪ್‌ಗೆ ತಳ್ಳಿ ತಾಯಿ ಆತ್ಮಹತ್ಯೆ 

Pinterest LinkedIn Tumblr


ಬೆಂಗಳೂರು,ಫೆ.೧೨-ಪತಿ ಅನಾರೋಗ್ಯದಿಂದ ನೊಂದ ಪತ್ನಿ ತನ್ನಿಬ್ಬರು ಮಕ್ಕಳನ್ನು ನೀರಿಗೆ ತೊಟ್ಟಿ(ಸಂಪ್)ಗೆ ತಳ್ಳಿ ಸಾಯಿಸಿ ತಾನೂ ಅದೇ ತೊಟ್ಟಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ತಾಯಿ ರೇಖಾ (೩೧), ಮಕ್ಕಳಾದ ನೂತನ (೭), ಮಾನ್ಯ (೬) ಅವರನ್ನು ರಾತ್ರಿ ಅಪ್ಪಗೆರೆಯ ಮನೆಯ ಮುಂದಿನ ನೀರಿನ ತೊಟ್ಟಿಗೆ ತಳ್ಳಿ ಸಾಯಿಸಿ ತಾನೂ ಅದೇ ತೊಟ್ಟಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೆನ್ನಪಟ್ಟಣದಲ್ಲಿ ತಳ್ಳುಗಾಡಿಯಲ್ಲಿ ಹೊಟೇಲ್ ನಡೆಸುತ್ತಿದ್ದ ತಮಿಳುನಾಡು ಮೂಲದ ನವೀನ್‌ನನ್ನು ೯ವರ್ಷಗಳ ಹಿಂದೆ ಮಂಡ್ಯ ಮೂಲದ ರೇಖಾ ವಿವಾಹವಾಗಿ ಅಪ್ಪಗೆರೆಯಲ್ಲಿ ವಾಸವಾಗಿದ್ದರು ಕೆಲ ದಿನಗಳ ಹಿಂದೆ ನವೀನ್‌ಗೆ ಲಿವರ್ ಜಾಂಡೀಸ್ ತಗುಲಿದ್ದು ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು.
ಆದರೂ ಗುಣಮುಖನಾಗದ ನವೀನ್‌ನನ್ನು ಪೋಷಕರು ಚೆನ್ನೈನಲ್ಲಿ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿದ್ದರು ಚಿಕಿತ್ಸೆ ಫಲಕಾರಿಯಾಗದೇ ಪತಿ ಮುಂದೆ ಪತಿ ಸಾಯಬಹುದು ಅವರ ಅಗಲಿಕೆಯಿಂದ ಜೀವನ ಸಾಗಿಸುವುದು ಕಷ್ಟ ಅಂತ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಾಯಿ ಮಕ್ಕಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಹಿತಿ ತಿಳಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.