ಬೆಂಗಳೂರು: ಬಹು ನಿರೀಕ್ಷಿತ ಎಫ್‍ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ 2017 ಆರಂಭಕ್ಕೆ ಸಜ್ಜಾಗಿದೆ. 54ನೇ ಆವೃತ್ತಿಯಲ್ಲಿ ದೇಶವನ್ನು ಪ್ರತಿನಿಧಿಸಬಲ್ಲ ಅತ್ಯಂತ ಸುಂದರ ಯುವತಿಯನ್ನು ಆಯ್ಕೆ ಮಾಡಲಾಗುತ್ತಿದ್ದು, ವಿಜೇತರು ಮಿಸ್ ವಲ್ರ್ಡ್ 2017ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಪ್ರತಿ ರಾಜ್ಯದಲ್ಲೂ ಆಯ್ಕೆ ನಡೆಯಲಿದ್ದು, ಅಲ್ಲಿನ ವಿಜೇತರು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆ. ಎಫ್‍ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ಕೇರಳ 2017, ಎಫ್‍ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ಕರ್ನಾಟಕ 2017 ಇತ್ಯಾದಿ ಆಯಾ ರಾಜ್ಯದ ಹೆಸರಿನಲ್ಲಿ ರಾಜ್ಯ ಮಟ್ಟದ ಸುತ್ತುಗಳು ನಡೆಯಲಿವೆ.
ನಾಲ್ಕು ವಲಯಗಳಲ್ಲಿ ರಾಜ್ಯವಾರು ಆಯ್ಕೆ ನಡೆಯಲಿದ್ದು, ಇಲ್ಲಿನ 3 ಸ್ಪರ್ಧಿಗಳು ಬೆಂಗಳೂರಿನಲ್ಲಿ ನಡೆಯುವ ಸ್ಟೇಟ್ ಜೋನಲ್ ಕ್ರೌನಿಂಗ್ ಕಾರ್ಯಕ್ರಮಕ್ಕೆ ಗೋಲ್ಡನ್ ಟಿಕೆಟ್ ಗಳಿಸಲಿದ್ದಾರೆ.
ಅರ್ಜಿ ಸಲ್ಲಿಕೆಗೆ ಅರ್ಹತೆ:
ಪ್ರಸ್ತುತ ರಾಜ್ಯದ ನಿವಾಸಿಯಾಗಿರಬೇಕು ಅಥವಾ/ ಆ ರಾಜ್ಯದಲ್ಲಿ ಹುಟ್ಟಿರಬೇಕು/ಆಕೆಯ ಪಾಲಕರು ರಾಜ್ಯದಲ್ಲಿರಬೇಕು ಅಥವಾ ಆಕೆ 12ನೇ ತರಗತಿವರೆಗಿನ ಶಿಕ್ಷಣವನ್ನು ಆ ರಾಜ್ಯದಲ್ಲಿ ಮುಗಿಸಿರಬೇಕು/ಎತ್ತರ 5’5 ಇರಬೇಕು.
ಮಾಜಿ ಮಿಸ್ ಇಂಡಿಯಾ ನೇಹಾ ದುಪಿಯಾ, ಪಾರ್ವತಿ ಓಮನ್‍ಕುಟ್ಟನ್, ಮಿಸ್ ಇಂಡಿಯಾ ಫೈನಲಿಸ್ಟ್ ವಾಲ್‍ಸುಚಾ ಡಿ ಸೋಜಾ, ದಿಪನಿತಾ ಶರ್ಮಾ ನಾಲ್ಕ ವಲಯಗಳ ತೀರ್ಪಿನ ಉಸ್ತುವಾರಿ ನೋಡಿಕೊಳ್ಳುತ್ತಾರೆ. 2017ರ ಜೂನ್‍ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅಂತಿಮ ವಿಜೇತರು ನಗದು ಬಹುಮಾನ ಸೇರಿದಂತೆ ಅನೇಕ ಅವಕಾಶ ಪಡೆಯಲಿದ್ದಾರೆ.
ಅರ್ಜಿ ಸಲ್ಲಿಸಲು www.missindia.in ತಾಣ ನೋಡಿ. ನಿಮ್ಮ ಕುರಿತು ಹಾಗೂ ನಿಮ್ಮ ಭಾವಚಿತ್ರವನ್ನು missindiaorganization@gmail.com ವಿಳಾಸಕ್ಕೆ ಮೇಲ್ ಮಾಡಿ.
ಕರ್ನಾಟಕ
Comments are closed.