ಕರ್ನಾಟಕ

ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಮೇಧಾ ಪಾಟ್ಕರ್ ಆಗ್ರಹ

Pinterest LinkedIn Tumblr
Activist Medha Patkar 

ಕಲಬುರ್ಗಿ: ಗುಜರಾತ್ ಮತ್ತು ಬಿಹಾರ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯ ನಿಷೇಧ ಮಾಡಬೇಕು ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್ ಆಗ್ರಹಿಸಿದರು.

ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಹಿಳಾ ಜನಜಾಗೃತಿ ಆಂದೋಲನ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಸ್ತ್ರೀಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಅಕ್ಕಿ, ಬೇಳೆ ಕೊಡುವುದು ನಿಲ್ಲಿಸಿದರೂ ಪರವಾಗಿಲ್ಲ. ಆದರೆ ಮದ್ಯ ನಿಷೇಧ ಮಾಡಬೇಕು ಎಂದು ಆಳಂದ ತಾಲ್ಲೂಕು ಮಹಿಳೆಯರು ಹೋರಾಟ ಆರಂಭಿಸಿದ್ದಾರೆ. ಇದನ್ನು ಶಾಸಕಾಂಗದ ಬಿ.ಆರ್. ಪಾಟೀಲ ಅವರು ಬೆಂಬಲಿಸಿದ್ದಾರೆ. ಪ್ರತಿ ಗ್ರಾಮದಲ್ಲೂ ಮಹಿಳೆಯರ ಬೇಡಿಕೆ ಇದೊಂದೆ ಆಗಿದೆ ಎಂದರು.

16 ಸಾವಿರ ಕೋಟಿ ರೂಪಾಯಿ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಮುಖ್ಯಮಂತ್ರಿಗಳು ಮನುಷ್ಯರ ಬದುಕಿಗೆ ಬೆಲೆ ಕಟ್ಟಬಾರದು. ಮದ್ಯದಿಂದ ಸಂಗ್ರಹಿಸುವ ಹಣವು ಪಾಪದ ಹಣವಾಗಿದ್ದು ಇದರಿಂದ ನಿಜವಾದ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದರು.

ಮದ್ಯ ನಿಷೇಧಿಸಿದರೆ ರಾಜ್ಯದ ಪ್ರತಿ ಮಹಿಳೆಯರು ಸರ್ಕಾರಕ್ಕೆ ಹಣ ಸಂಗ್ರಹಿಸಿ ಕೊಡುತ್ತಾರೆ. ಮದ್ಯಕ್ಕೆ ವೆಚ್ಚ ಮಾಡುವ ಹಣವು ಗ್ರಾಮದಲ್ಲೆ ಉಳಿಯುತ್ತದೆ. ಇದರಿಂದ ಕೃಷಿ, ಕೃಷಿ ಸಂಬಂಧಿತ ಚಟುವಟಿಕೆಗಳು ಹೆಚ್ಚಾಗಿ ಸರ್ಕಾರಕ್ಕೆ ಆದಾಯ ಹೆಚ್ಚಾಗುತ್ತದೆ ಎಂದರು.

Comments are closed.