
ಕೋಲಾರ(ಫೆ.09): ಟೊಮ್ಯಾಟೋ, ಪ್ರತಿಯೊಬ್ಬರ ಅಡುಗೆ ಮನೆಯೊಲ್ಲೂ ಇದ್ದೇ ಇರುತ್ತದೆ. ಪ್ರತಿನಿತ್ಯವೂ ಟೊಮ್ಯಾಟೋ ಮಿಶ್ರಿತ ಸಾಂಬಾರ್ ಸೇವಿಸುತ್ತೇವೆ. ಆದ್ರೆ ಇನ್ಮುಂದೆ ಅಡುಗೆ ಮಾಡುವಾಗ ಟೊಮ್ಯಾಟೋ ಮುಟ್ಟುವುದಕ್ಕೂ ಭಯ ಪಡುತ್ತೀರಿ? ಯಾಕೆ ಗೊತ್ತಾ? ಇಲ್ಲಿದೆ ನೋಡಿ ಟೊಮ್ಯಾಟೋ ಶಾಕಿಂಗ್ ನ್ಯೂಸ್.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಒಂದು ಶಾಕಿಂಗ್ ನ್ಯೂಸ್ ನೀಡಿದ್ದು, ರೈತರು ಬೆಳೆಯುವ ಟೊಮೊಟೊ ಹಾಗೂ ಹಾಗಲಕಾಯಿ ತರಕಾರಿಯಲ್ಲಿ ವಿಷಕಾರ ಅಂಶ ಹೆಚ್ಚಾಗಿದೆ ಎಂದು ವರದಿ ನೀಡಿದೆ. ಒಂದು ವೇಳೆ ಟೊಮ್ಯಾಟೋ ತಿಂದರೆ ಪುರುಷತ್ವಕ್ಕೆ ಕುತ್ತು ಬರುತ್ತಂತೆ.
ದೇಶದಲ್ಲಿ ಅತಿ ಹೆಚ್ಚು ತರಕಾರಿ ಬೆಳೆಯುವ ಏಕೈಕ ಜಿಲ್ಲೆ ಕೋಲಾರ. ಕೋಲಾರ ತಾಲ್ಲೂಕು ಗಿರ್ನಹಳ್ಳಿ ಗ್ರಾಮ ಹನುಮಂತರಾಯಪ್ಪ ರೈತನ ತರಕಾರಿಗಳಲ್ಲಿ ಶಿಲೀಂದ್ರನಾಶಕ ಅಂದರೆ ಕೀಟನಾಶಕ ಅಂಶ ಹೆಚ್ಚಾಗಿದೆ. ಈ ತರಕಾರಿಗಳನ್ನು ಮನುಷ್ಯ ಸೇವನೆ ಮಾಡಿದರೆ ಆರೋಗ್ಯದಲ್ಲಿ ಪರಿಣಾಮ ಬೀರಿ ನಪುಂಸಕತ್ವಕ್ಕೆ ಕಾರಣವಾಗುತ್ತದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸಂಶೋಧನೆಯಿಂದ ಟೊಮೊಟೊ ಹಾಗಲಕಾಯಿ ಯಲ್ಲಿ ವಿಷಕಾರಕ ಅಂಶ ಹೆಚ್ಚಾಗಿದೆ ಎಂದು ಧೃಢಪಟ್ಟಿದ್ದು ಜಿಲ್ಲೆಯ ಇತರೆ ರೈತರಲ್ಲಿ ಅತಂಕ ಮೂಡಿಸಿದೆ.
ಇನ್ನೂ ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದಕ್ಕೆ ಜಿಲ್ಲೆಯ ರೈತರು ಕಂಗೆಟ್ಟು ಹೋಗಿದ್ದಾರೆ. ಕೃಷಿ ಅಧಿಕಾರಿಗಳು ಕಾಲಕಾಲಕ್ಕೆ ತರಕಾರಿ ಬೆಳೆಗಳಿಗೆ ಕೀಟನಾಶಕ, ರೋಗ ನಾಶಕ ಸಿಂಪರಣೆ ಬಗ್ಗೆ ಸೂಕ್ತ ಮಾಹಿತಿ ನೀಡಿದೇ ನಿರ್ಲಕ್ಷತೆ ವಹಿಸಿದ್ದಕ್ಕೆ ಹೀಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಟೊಮ್ಯಾಟೋ, ಹಾಗಲಕಾಯಿ ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಈಗ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಒಂದು ದಾರಿ ತೋರಿಸಬೇಕಿದೆ.
ಕರ್ನಾಟಕ
Comments are closed.