ಕರ್ನಾಟಕ

ತಾಳಿ ಕಟ್ಟುವ ಕೆಲವೇ ನಿಮಿಷದಲ್ಲಿ ಮೃತನಾದ ವರ

Pinterest LinkedIn Tumblr


ಮೂರುಗಂಟಿನ ನಂಟಿನ ಮೂಲಕ ಹೊಸ ಜೀವನಕ್ಕೆ ಕಾಲಿಡಬೇಕಾದವರ ಜೀವನಕ್ಕೆ, ಜವರಾಯ ಎಂಟ್ರಿ ಕೊಟ್ಟುಬಿಟ್ಟ. ಇನ್ನೇನು ಕೆಲವೇ ಕ್ಷಣದಲ್ಲಿ ತಾಳಿ ಕಟ್ಟಿ ಸಪ್ತಪದಿ ತುಳಿಯಬೇಕಿದ್ದ ವರ, ಯಮಪಾಶಕ್ಕೆ ಗುರಿಯಾದ. ಇಂತಹದೊಂದು ಹೃದಯ ವಿದ್ರಾವಕ ಘಟನೆ ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ವರ ವಸಂತಕುಮಾರ ತಾಳಿ ಕಟ್ಟುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕಾತ್ಯಾಯಿನಿ ಎಂಬ ವಧುವನ್ನು ವರಿಸ ಬೇಕಿದ್ದ ವಸಂತ್ ಕುಮಾರ್, ದುರಾದೃಷ್ಟವಶಾತ್ ಹೃದಯಾಘಾತದಿಂದ ವಿಧಿವಶವಾಗಿದ್ದು, ಮದುವೆ ಸಂಭ್ರಮವಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ.

Comments are closed.