ಕರ್ನಾಟಕ

ತೀವ್ರ ಅಸ್ವಸ್ಥಗೊಂಡಿದ್ದ ಯುವಕನನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆತಂದ ಏರ್ ಆ್ಯಂಬುಲೆನ್ಸ್ !

Pinterest LinkedIn Tumblr

ಬೆಂಗಳೂರು: ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಏರ್ ಆ್ಯಂಬುಲೆನ್ಸ್‌ ಗೆ ಚಾಲನೆ ನೀಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಸೇವೆ ನೀಡಿ ಇದು ಮೆಚ್ಚುಗೆ ಪಡೆದಿದೆ. ತುರ್ತು ಪರಿಸ್ಥಿತಿಯಲ್ಲಿದ್ದ ಯುವಕನನ್ನ ಶನಿವಾರ ಬಳ್ಳಾರಿಯಿಂದ ಬೆಂಗಳೂರಿನ ನಾರಾಯಣ ಹೆಲ್ತ್‌ ಕೇರ್‌ಗೆ ಕರೆತಲಾಗಿದೆ.

ಬಳ್ಳಾರಿಯ ಕಾರ್ಖಾನೆಯೊಂದರಲ್ಲಿ ವಿಷಗಾಳಿ ಸೇವಿಸಿ ಅಸ್ವಸ್ಥನಾಗಿದ್ದ ಎಂಜಿನಿಯರ್ ಸಂದೀಪ್‌ ಎಂಬ ವ್ಯಕ್ತಿಗೆ ತಕ್ಷಣ ಹೆಚ್ಚಿನ ಚಿಕಿತ್ಸೆ ನೀಡಬೇಕಾದುದರಿಂದ ಏರ್ ಆ್ಯಂಬುಲೆನ್ಸ್‌ ಮೂಲಕ ಈತನನ್ನು ಜಿಂದಾಲ್ ಸಂಜೀವಿನಿ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ರವಾನಿಸಲಾಗಿದೆ.

ಅಲ್ಲದೇ ರೋಗಿಗೆ ಯಾವುದೇ ತೊಂದರೆಯಾಗದಂತೆ ಹೆಲಿಕಾಪ್ಟ್‌ರ್‌ನಲ್ಲಿಯೇ ಇದ್ದ ಆಕ್ಸಿಜನ್ ಹಾಗೂ ತುರ್ತು ನಿಘಾ ಘಟಕ ವ್ಯವಸ್ಥೆಯಿಂದ ಸಂದೀಪ್‌ನನ್ನು ಬೆಂಗಳೂರಿಗೆ ತರಲಾಗಿದೆ.

ಖಾಸಗಿ ಕಂಪನಿ ಏವಿಯೇಟರ್ ಏರ್ ರೆಸ್ಕ್ಯೂ ಸಂಸ್ಥೆಯಿಂದ ಏರ್ ಆ್ಯಂಬುಲೆನ್ಸ್‌ ಸೇವೆಯನ್ನು ಒದಗಿಸಿದ್ದು, ಈ ಸೇವೆಗೆ ಸುಮಾರು ಮೂರುವರೆ ಲಕ್ಷ ರೂ. ವೆಚ್ಚವಾಗಿದೆ. ಅಲ್ಲದೇ ಬಳ್ಳಾರಿಯಿಂದ ಇಲ್ಲಿಗೆ ಕೇವಲ ಒಂದು ಗಂಟೆ ಹದಿನೈದು ನಿಮಿಷದಲ್ಲಿ ಕರೆತರಲಾಗಿದೆ.

Comments are closed.