ಕರ್ನಾಟಕ

ಸೆಕ್ಸ್ ನಡೆಸಲು ಹೆಚ್ಚಿಗೆ ಹಣ ಕೇಳಿದ್ದಕ್ಕಾಗಿ ಉಗಾಂಡಾ ಮೂಲದ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿದ ಯುವಕ

Pinterest LinkedIn Tumblr

ಬೆಂಗಳೂರು : ನಗರದಲ್ಲಿ ಬುಧವಾರ ರಾತ್ರಿ ವಿದೇಶಿ ವಿದ್ಯಾರ್ಥಿನಿಯೊಬ್ಬಳ ಹತ್ಯೆ ನಡೆದಿದ್ದು ಭಾರೀ ಸುದ್ದಿಯಾಗಿದೆ. ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿ ಯ ತಿಮ್ಮೇಗೌಡ ಲೇಔಟ್‌ನಲ್ಲಿ ಉಗಾಂಡಾ ಮೂಲದ ವಿದ್ಯಾರ್ಥಿನಿಯನ್ನು ಹಿಮಾಚಲ ಪ್ರದೇಶ ಮೂಲದ ಯುವಕನೊಬ್ಬ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ.

ಇಶಾನ್‌ ಎಂಬ ಎಂ.ಟೆಕ್‌ ಪದವಿಧರ,ಉದ್ಯೋಗ ಅರಸಿ ಬಂದಿದ್ದ ಯುವಕನಿಗೆ ಉಗಾಂಡ ವಿದ್ಯಾರ್ಥಿನಿ ನಕಾಯಾಕಿ ಫ್ಲೋರೆನ್ಸ್‌ ಎಂಬಾಕೆಯೊಂದಿಗೆ ಪರಿಚಯವಾಗಿದ್ದು, ಪರಸ್ಪರ ಒಪ್ಪಿಗೆ ಯೊಂದಿಗೆ ಸೆಕ್ಸ್‌ ನಡೆಸಲು ಮುಂದಾಗಿದ್ದರು. ಇದಕ್ಕಾಗಿ 5000 ರೂಪಾಯಿ ನೀಡುವುದಾಗಿ ಇಶಾನ್‌ಡೀಲ್‌ ಮಾಡಿಕೊಂಡಿದ್ದ ಎನ್ನಲಾಗಿದೆ.

ಸಂಜೆ ರೂಮ್‌ಗೆ ಬಂದಿದ್ದ ಇಶಾನ್‌ ಬಳಿ ಸೆಕ್ಸ್‌ ನಡೆಸಬೇಕಾದರೆ 10000 ರೂಪಾಯಿ ನೀಡಬೇಕು ಎಂದು ಫ್ಲೋರೆನ್ಸ್‌ ಬೇಡಿಕೆ ಇಟ್ಟಿದ್ದಾಳೆ. ಈ ವೇಳೆ ಜಗಳ ನಡೆದು ಫ್ಲೋರೆನ್ಸ್‌ಳನ್ನು ಇರಿದು ಇಶಾನ್‌ ಹತ್ಯೆ ಗೈದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈಗಾಗಲೇ ಇಶಾನ್‌ನನ್ನು ಬಂಧಿಸಲಾಗಿದೆ.

ಇನ್ಸ್‌ಪೆಕ್ಟರ್‌ ಮೇಲೆ ದಾಳಿ ಯತ್ನ
ಕೊಲೆಯಾದ ಬಳಿಕ ತನಿಖೆಗೆ ಆಗಮಿಸಿದ ಇನ್ಸ್‌ಪೆಕ್ಟರ್‌ ಅಂಜನ್‌ ಕುಮಾರ್‌ ಎನ್ನುವವರ ಮೇಲೆ ಉಗಾಂಡಾದ ಉದ್ರಿಕ್ತ ವಿದ್ಯಾರ್ಥಿಗಳು ದಾಳಿಗೆ ಮುಂದಾದ ಬಗ್ಗೆ ವರದಿಯಾಗಿದೆ. ಸ್ಥಳದಲ್ಲಿ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ಘಟನೆಯ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಹೇಳಿಕೆ ನೀಡಿದ್ದು, ನಗರದಲ್ಲಿ ವಿದೇಶಿ ವಿದ್ಯಾರ್ಥಿಗಳ ಪುಂಡಾಟ ಮೀತಿ ಮೀರಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಆ ಬಳಿಕ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿದ್ಯಾಥಿಗಳ ಶಿಕ್ಷಣಕ್ಕೆ ಕೇಂದ್ರ ಅನುಮತಿ ನೀಡಿದ್ದು ಈಗ ಪುಂಡಾಟ ಮೀತಿ ಮೀರಿದ್ದು ಇದನ್ನು ಕೇಂದ್ರದ ಗಮನಕ್ಕೆ ತರುವುದಾಗಿ ಸಚಿವ ಪರಮೇಶ್ವರ್‌ ತಿಳಿಸಿದರು.

Comments are closed.