ಕರ್ನಾಟಕ

ಜ್ಯೋತಿಷ್ಯದ ಹೆಸರಲ್ಲಿ ಗೃಹಿಣಿಯಿಂದ ಲಕ್ಷಾಂತರ ರೂ.ಲೂಟಿ ಮಾಡಿದ  ಜ್ಯೋತಿಷಿ ಬಂಧನ

Pinterest LinkedIn Tumblr


ಶಿವಮೊಗ್ಗ(ಜ.29): ಜ್ಯೋತಿಷ್ಯದ ಹೆಸರಲ್ಲಿ ಗೃಹಿಣಿಯಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದ ಕಳ್ಳ ಜ್ಯೋತಿಷಿ 5 ತಿಂಗಳ ಬಳಿಕ ಅಂದರ್ ಆಗಿದ್ದಾನೆ. ಶಿವಮೊಗ್ಗದ ವಿನೋಬ ನಗರದಲ್ಲಿ ಜ್ಯೋತಿಷ್ಯದ ಹೆಸರಲ್ಲಿ ಗೃಹಣಿಯೊಬ್ಬಳನ್ನು ನಂಬಿಸಿ ಲಕ್ಷಗಟ್ಟಲೇ ಹಣವನ್ನು ತನ್ನ ಅಕೌಂಟ್​ಗೆ ಹಾಕಿಸಿಕೊಂಡಿದ್ದ ಖತರ್ನಾಕ್ ಜ್ಯೋತಿಷಿಯನ್ನು ಶಿವಮೊಗ್ಗದ ಪೋಲಿಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ತುಕಾರಾಂ ಸಿಂಧ್ಯಾ, ಜ್ಯೋತಿಷ್ಯದ ಹೆಸರಲ್ಲಿ ಗೃಹಣಿಯೊಬ್ಬಳನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಜ್ಯೋತಿಷಿಯನ್ನು ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ. ಕಳೆದೊಂದು ವರ್ಷದಿಂದ ವಿನೋಬನಗರದ ಟೈಲರಿಂಗ್ ವೃತ್ತಿಯಲ್ಲಿದ್ದ ಗೃಹಿಣಿಯೊಬ್ಬಳು ಮ್ಯಾಗಜೀನ್’​ವೊಂದರಲ್ಲಿ ಬಂದಿದ್ದ ಜಾಹೀರಾತು ನೋಡಿ ಮೊಬೈಲ್ ನಂಬರ್​’ಗೆ ಕರೆ ಮಾಡಿದ್ದಾರೆ. ಕರೆ ಬಂದಿದ್ದೇ ತಡ ಅತ್ತ ಕಡೆಯಿಂದ ನಿಮ್ಮದು ಕೌಟುಂಬಿಕ ಸಮಸ್ಯೆಯೇ ಇರಲಿ, ವ್ಯವಹಾರಿಕ ಸಮಸ್ಯೆಯೇ ಇರಲಿ, ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಮಾಡುತ್ತೇವೆ ಅಂತ ಜ್ಯೋತಿಷಿ ಬಡ ಬಡಾಯಿಸಿದ್ದಾನೆ.
ಕಳ್ಳ ಜ್ಯೋತಿಷಿಯನ್ನು ನಂಬಿದ ಗೃಹಿಣಿ ಸುಮಾರು 2 ಲಕ್ಷ ರೂ.ಗಳಷ್ಟು ಹಣ ನೀಡಿದ ಗೃಹಿಣಿಗೆ ತಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹಣ ವಾಪಸ್ ಕೊಡಿ ಅಂತ ಕೇಳಿದಾಗ ಜ್ಯೋತಿಷಿಯೇ ಸತ್ತು ಹೋಗಿದ್ದಾನೆಂದು ಸುಳ್ಳು ಹೇಳಿ ಗೃಹಿಣಿಯನ್ನು ವಂಚಿಸಿದ್ದಾನೆ. ಈ ಹಿನ್ನಲೆಯಲ್ಲಿ ಕಳೆದ 5 ತಿಂಗಳ ಹಿಂದೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು ವಿನೋಬನಗರ ಪಿಎಸ್ಐ ರಾಘವೇಂದ್ರ ಖಂಡಿಕೆ ತುಕಾರಾಂ ಸಿಂಧ್ಯಾನನ್ನು ಬಂಧಿಸಿದ್ದಾರೆ.
ಇನ್ನು ವಿಚಾರಣೆಯ ವೇಳೆ ಈತ ಜ್ಯೋತಿಷ್ಯದ ಹೆಸರಲ್ಲಿ ಹಲವು ಮಹಿಳೆಯರನ್ನು ವಂಚಿಸಿರುವಾಗಿ ತಿಳಿದು ಬಂದಿದೆ. ಒಟ್ಟಿನಲ್ಲಿ ಸುಳ್ಳು ಭವಿಷ್ಯ ಹೇಳಿ ಹಣ ಲೂಟಿ ಮಾಡುವ ಕಳ್ಳ ಜ್ಯೋತಿಷಿಗಳಿದ್ದಾರೆ ಹುಷಾರಾಗಿರಿ.

Comments are closed.