ಕರ್ನಾಟಕ

ಆಯುರ್ವೇದಿಕ ರಕ್ತಚಂದನದಲ್ಲಿದೆ ಔಷಧಿಯುಕ್ತ ಗುಣಗಳು

Pinterest LinkedIn Tumblr

ಮಂಗಳೂರು: ಅಪರೂಪದ ಸಸ್ಯವೆನಿಸಿರುವ ರಕ್ತಚಂದನ ಮರ ಕಂಡವರು ವಿರಳ. ಚೆನ್ನಾಗಿ ಬಲಿತ ಮರದ ಕೊರಡನ್ನು ತೇದರೆ ರಕ್ತದಂತೆ ಕೆಂಪಾದ ಗಂಧ ಬರುವುದು ಇದರ ವಿಶೇಷತೆ.ವೈಜ್ಞಾನಿಕವಾಗಿ ಟೆರೋಕಾರ್ಪಸ್ ಸನ್‌ಥಾಲಿನಸ್ ವರ್ಗಕ್ಕೆ ಸೇರಿದ ಈ ಚಂದನ, ದಕ್ಷಿಣ ಭಾರತದ ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ಸಿಗುತ್ತದೆ.

ಭಾರತೀಯ ಮೂಲದ ಈ ಮರ ತನ್ನ ಉಡಿಯಲ್ಲಿ ಔಷಧಿಯುಕ್ತ ಅಂಶವನ್ನು ಇಟ್ಟುಕೊಂಡಿದೆ. ಈ ಮರದ ತೊಗಟೆಯನ್ನು ಸ್ವಲ್ಪ ಗೀರಿದರೆ ಕೆಂಪು ದ್ರವ ಬರುತ್ತದೆ. ಕ್ಷಣಾರ್ಧದಲ್ಲಿಯೇ ಆ ಭಾಗವೆಲ್ಲಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಇದಕ್ಕೆ ರಕ್ತಚಂದನ ಅಥವಾ ಕೆಂಪುಚಂದನ ಎಂಬ ಹೆಸರು ಬಂದಿದೆ.

ಔಷಧ ಗುಣ:
ಕೆಂಪುಚಂದನದಲ್ಲಿ ಔಷಧಿ ಅಂಶ ಇರುವುದರಿಂದ ಮುಖದ ಮೊಡವೆ ನಿವಾರವಣೆಗೆ ಹಾಗೂ ಕಾಂತಿವರ್ಧಕವಾಗಿಯೂ ಬಳಸಲಾಗುತ್ತದೆ. ಮರದ ಚಕ್ಕೆಯನ್ನು ನುಣ್ಣಗೆ ಅರೆದು ಪುಡಿಯನ್ನು ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಮುಖ ಕಾಂತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೆ ಗಿಡದ ಭಾಗಗಳನ್ನು ಔಷಧ ರೂಪದಲ್ಲಿ ಸೇವಿಸುವುದರಿಂದ ಒಳ್ಳೆಯದೆಂಬ ಬಲವಾದ ನಂಬಿಕೆಯೂ ಇದೆ.

ಬಾಹುಬಲಿಯ ಮಸ್ತಕಾಭಿಷೇಕದ ಸಂದರ್ಭದಲ್ಲಿ ರಕ್ತಚಂದನವನ್ನು ಕೊಡಗಳಲ್ಲಿ ಅಭಿಷೇಕ ಮಾಡಲಾಗುತ್ತದೆ. ಎಳೆಯ ಮಗುವಿನ ಮೈಗೆ ದಿನಾ ಚಂದನ ಲೇಪಿಸಿ ಬಳಿಕ ಸ್ನಾನ ಮಾಡಿಸುವ ಪದ್ಧತಿಯಿದೆ. ಇದರಿಂದ ಅನೇಕ ಚರ್ಮರೋಗಗಳು ಕಾಣೆಯಾಗಿ ಚರ್ಮ ಕಾಂತಿಯುಕ್ತವಾಗುತ್ತದೆ.
ಆಯುರ್ವೇದದಲ್ಲಿ ಅದರ ಅನೇಕ ಔಷಧೋಪಯೋಗಗಳ ವಿವರಗಳಿವೆ.

Comments are closed.