ಕರ್ನಾಟಕ

ಗಣರಾಜ್ಯೋತ್ಸವ ಪರೇಡ್’ನಲ್ಲಿ ರಾಜ್ಯದಿಂದ ಕಿನ್ನರ ಜೋಗಿಗಳು

Pinterest LinkedIn Tumblr


ಚಿತ್ರದುರ್ಗ(ಜ.25): ತಂಬೂರಿ ಹಿಡಿದುಕೊಂಡು ಮನೆ ಮನೆಗೂ ಬಂದು ಮಹಾಭಾರತದ ಕಥೆಗಳನ್ನು ಹೇಳುತ್ತಾ ಭೀಕ್ಷೆ ಬೇಡುತ್ತಿದ್ದ ಕಿನ್ನರ ಜೋಗಿಗಳು, ಕರ್ನಾಟಕದ ಜನಪದ ಶೈಲಿಯನ್ನು ನಾಳೆ ಇಡೀ ದೇಶಕ್ಕೇ ಪರಿಚಯಿಸಲಿದ್ದಾರೆ.
ನಾಳೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್​’ನಲ್ಲಿ ಭಾಗವಹಿಸಲಿರುವ ಈ ಕಿನ್ನರ ಜೋಗಿಗಳು ಕನ್ನಡಿಗರ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಎನ್ ದೇವರಹಳ್ಳಿಯಲ್ಲಿ ವಾಸವಾಗಿರುವ ಈ ಕಿನ್ನರ ಜೋಗಿಗಳ ಸಮುದಾಯದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.
ಆಕರ್ಷಕ ವೇಷ ಭೂಷಣ ಧರಿಸಿಕೊಂಡು, ಅಲೆಮಾರಿಗಳಂತೆ ಬದುಕುವ ಇವರು ಈಗ ದೆಹಲಿ ಪರೇಡ್​’ನಲ್ಲಿ ಭಾಗಿಯಾಗಲಿದ್ದಾರೆ. ಇಂತಹ ಸುವರ್ಣ ಅವಕಾಶ ಸಿಕ್ಕಿರುವುದರಿಮದ ಇಡೀ ಹಾಡಿಯಲ್ಲಿ ಸಂಭ್ರಮ ಮನೆ ಮಾಡಿದೆ.

Comments are closed.