ಕರ್ನಾಟಕ

ಬೆಂಗಳೂರು ಟಿ-ಟ್ವೆಂಟಿ ಪಂದ್ಯಕ್ಕೆ ಜನವರಿ 28 ರಿಂದ ಟಿಕೆಟ್ ಮಾರಾಟ

Pinterest LinkedIn Tumblr


ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಫೆಬ್ರವರಿ 1 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-ಟ್ವೆಂಟಿ ಪಂದ್ಯಕ್ಕೆ ಜನವರಿ 28 ರಿಂದ ಟಿಕೆಟ್ ಮಾರಾಟ ಮಾಡಲಾಗುವುದು ಎಂದು ಕೆಎಸ್ ಸಿಎ ಪ್ರಕಟಿಸಿದೆ.

ಈಗಾಗಲೇ ಆನ್ ಲೈನ್ ಬುಕಿಂಗ್ ಪ್ರಾರಂಭವಾಗಿದ್ದು, ಕ್ರೀಡಾಂಗಣದಲ್ಲಿ 28 ರಿಂದ ಟಿಕೆಟ್ ಖರೀದಿಗೆ ಲಭ್ಯವಿರುತ್ತದೆ. ಪಂದ್ಯ 7 ಗಂಟೆಗೆ ಆರಂಭವಾಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣ ನವೀಕರಣಗೊಂಡ ನಂತರ ನಡೆಯುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಇದಾಗಲಿದೆ.

ಮೊದಲೇ ಟಿ-ಟ್ವೆಂಟಿ ಪಂದ್ಯ. ಹೀಗಾಗಿ ವೀಕ್ಷಕರ ಸಂಖ್ಯೆ ಬಹಳಷ್ಟಿರುವುದಂತೂ ಖಂಡಿತ. ಮೊದಲ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ. ದ್ವಿತೀಯ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ಅಂತಿಮ ಪಂದ್ಯ ನಡೆಯಲಿದೆ.

Comments are closed.