ಕರ್ನಾಟಕ

ಅತಿ ಉಷ್ಣಾಂಶದಲ್ಲಿ ಬೇಯಿಸಿದ ಸ್ಟಾರ್ಚ್ ಯುಕ್ತ ಆಹಾರ ಪದಾರ್ಥಗಳ ಸೇವಿನೆಯಿಂದ ಅಪಾಯ

Pinterest LinkedIn Tumblr

ಮಂಗಳೂರು: ಸುಟ್ಟ ಟೋಸ್ಟ್, ಅತಿಯಾಗಿ ರೋಸ್ಟ್ ಮಾಡಲ್ಪಟ್ಟ ಆಲೂಗಡ್ಡೆ ಹಾಗೂ ಅತಿ ಉಷ್ಣಾಂಶದಲ್ಲಿ ಬೇಯಿಸಿದ ಸ್ಟಾರ್ಚ್ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿದವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಫುಡ್ ಸ್ಟ್ಯಾಂಡರ್ಡ್ ಏಜೆನ್ಸಿ ಈ ನಿಟ್ಟಿನಲ್ಲಿ ಜಾಗೃತಿ ಅಭಿಯಾನವೊಂದನ್ನು ಹಮ್ಮಿಕೊಂಡಿದೆ.

ಪ್ರಾಣಿಗಳ ಮೇಲೆ ನಡೆಸಲಾದ ಈ ಪರೀಕ್ಷೆಯಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚೆಂದು ಕಂಡು ಬಂದಿದ್ದರೂ ಮನುಷ್ಯರಲ್ಲೂ ಇಷ್ಟೇ ಅಪಾಯವುಂಟಾಗ ಬಹು ದೆಂಬುದು ಇನ್ನೂ ಸಾಬೀತಾಗಿಲ್ಲ. ಇಲಿಗಳ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಅಕ್ರಿಲಮೈಡ್ ಎಂಬ ಕಂಪೌಂಡ್ ಅತ್ಯಧಿಕವಾಗಿದ್ದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚೆಂದು ಕಂಡು ಬಂದಿದೆ. ಇದೇ ಅಕ್ರಿಲಮೈಡ್ ನಿಂದಾಗಿ ಬ್ರೆಡ್ ಹಾಗೂ ಬಟಾಟೆಗಳನ್ನು ಕರಿದಾಗ, ಟೋಸ್ಟ್ ಮಾಡಿದಾಗ ಅವುಗಳು ಕಂದು ಬಣ್ಣಕ್ಕೆ ತಿರುಗುತ್ತವೆ.

ಗ್ಲುಕೊಸ್ ಅಂಶವು ಅಸ್ಪರಗಿನ್ ಎಂಬ ಅಮಿನೊ ಆಸಿಡ್ ನೊಂದಿಗೆ ಸೇರಿದಾಗಹಾಗೂ ಈ ಆಹಾರ ಪದಾರ್ಥಗಳನ್ನು 120 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿದಾಗ ಅಕ್ರಿಲಮೈಡ್ ಉಂಟಾಗುತ್ತದೆ.

ತುಂಬಾ ಹೊತ್ತು ಬೇಯಿಸಿದಾಗ ಅಥವಾ ಟೋಸ್ಟ್ ಮಾಡಿದಾಗ ಈ ಆಹಾರ ಪದಾರ್ಥಗಳು ಗೋಲ್ಡನ್ ಬಣ್ಣದಿಂದ ಕಂದು ಬಣ್ಣಕ್ಕೆ ಹಾಗೂ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹೀಗೆ ಹೆಚ್ಚು ಹೆಚ್ಚು ಅಕ್ರಿಲಮೈಡ್ ಉತ್ಪತ್ತಿಗೊಂಡಾಗ ಕ್ಯಾನ್ಸರ್ ಉಂಟಾಗುವ ಅಪಾಯವೂ ಹೆಚ್ಚುತ್ತಾ ಹೋಗುತ್ತದೆ, ಎಂದು ತಜ್ಞರು ವಿವರಿಸುತ್ತಾರೆ.

ಜನರು ಟೋಸ್ಟ್ ಅಥವಾ ಬೇರ್ಯಾವುದೇ ಸ್ಟಾರ್ಚ್ ಯುಕ್ತ ಆಹಾರ ಕಪ್ಪು ಬಣ್ಣಕ್ಕೆ ತಿರುಗುವ ತನಕ ಕರಿಯಬಾರದು ಎಂದೂ ತಜ್ಞರು ಸಲಹೆ ನೀಡುತ್ತಾರೆ.

ಕೃಪೆ:ವಾಭಾ

Comments are closed.