ಕರ್ನಾಟಕ

ಈ ಜನ್ಮದಲ್ಲಿ ರಾಯಣ್ಣ ಬ್ರಿಗೇಡ್‌ ಒಪ್ಪಿಕೊಳ್ಳಲ್ಲ: ಯಡಿಯೂರಪ್ಪ

Pinterest LinkedIn Tumblr


ಕಲಬುರಗಿ: ರಾಯಣ್ಣ ಬ್ರಿಗೇಡ್ ಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ವಿರದ್ಧ ಭಾನುವಾರ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಈ ಜನ್ಮದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಕಾರಿಣಿಯ 2 ನೇ ದಿನವಾದ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಾನು ಯಾವುದೇ ಕಾರಣಕ್ಕೂ ಬ್ರಿಗೇಡ್‌ ಚಟುವಟಿಕೆಗಳನ್ನು ಒಪ್ಪುವುದಿಲ್ಲ. ಬ್ರಿಗೇಡ್‌ ಚಟುವಟಿಕೆಗೆ ಅವಕಾಶ ನೀಡಿದರೆ ತಪ್ಪು ಸಂದೇಶರವಾನೆಯಾಗುತ್ತದೆ. ಹೀಗಾಗಿ ಈಶ್ವರಪ್ಪ ಅವರು ಸಹ ಬ್ರಿಗೇಡ್ ಸಭೆಗೆ ಹೋಗುವುದು ಸರಿಯಲ್ಲ. ಈ ಎಲ್ಲಾ ವಿಚಾರವನ್ನು ನಾನು ಪಕ್ಷದ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್ ಅವರ ಗಮನಕ್ಕೆ ತಂದಿದ್ದು, ಪಕ್ಷದ ಚಟುವಟಿಕೆಗೆ ಧಕ್ಕೆ ತಂದೆರೆ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಮುರಳಿಧರ್ ರಾವ್‌ ಅವರು ಎಲ್ಲವನ್ನೂ ಈಶ್ವರಪ್ಪ ಅವರಿಗೆ ಮನವರಿಕೆ ಮಾಡಿದ್ದಾರೆ. ಬದಲಾಯಿಸಿಕೊಳ್ಳಿ, ಕಾರ್ಯಕಾರಿಣಿ ನಡೆಯುವ ವೇಳೆ ಈಶ್ವರಪ್ಪ ಅವರು ಇಲ್ಲಿಲ್ಲದೇ ಬೇರೆಲ್ಲೋ ಬ್ರಿಗೇಡ್‌ ಹೆಸರಿನಲ್ಲಿ ಭಾಗವಹಿಸುವುದು ಸರಿಯಲ್ಲ ಬಿಎಸ್ ವೈ ಹೇಳಿದ್ದಾರೆ.
ಇನ್ನು ಬಿಎಸ್ ವೈಗೆ ಸೆಡ್ಡು ಹೊಡೆದಿರುವ ಈಶ್ವರಪ್ಪ ಅವರು ಜನವರಿ 26ರಂದು ಕೂಡಲ ಸಂಗಮದಲ್ಲಿ ನಡೆಯುವ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ಹೋಗುವುದಾಗಿ ಹೇಳಿದ್ದಾರೆ.

Comments are closed.