ಕರ್ನಾಟಕ

ಶಾಸಕ ರಾಜು ಕಾಗೆ ಕೈದಿ ಸಂಖ್ಯೆ7895

Pinterest LinkedIn Tumblr


ಬೆಳಗಾವಿ(ಜ.21): ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಕಾಗವಾಡ ಶಾಸಕ ರಾಜು ಕಾಗೆ ಫ್ಯಾಮಿಲಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದೆ. ಹಿಂಡಲಗಾ ಜೈಲಿನಲ್ಲಿರುವ ಶಾಸಕ ರಾಜುಕಾಗೆ ಕೈದಿ ಸಂಖ್ಯೆ ನೀಡಲಾಗಿದೆ.
ವಿವೇಕ್ ಶೆಟ್ಟಿ ಮೇಲೆ ಹಲ್ಲೆ ಪ್ರಕರಣ: ಹಿಂಡಲಗಾ ಜೈಲಿನಲ್ಲಿ ‘ಕಾಗೆ’ ಹಿಂಡು
ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಮಾತಿನಂತೆ ಬಿಜೆಪಿ ಶಾಸಕ ರಾಜು ಕಾಗೆ ಕುಟುಂಬ ಜೈಲಿನಲ್ಲಿ ಮುದ್ದೆ ಮುರಿಯುತ್ತಿದೆ. ಜನವರಿ ಒಂದರಂದು ವಿವೇಶ್ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶಾಸಕ ರಾಜು ಕಾಗೆ ಸೇರಿದಂತೆ ಆರು ಮಂದಿ ಹಿಂಡಲಗಾ ಜೈಲುಪಾಲಾಗಿದ್ದಾರೆ.
ಶಾಸಕ ರಾಜು ಕಾಗೆ ಕೈದಿ ಸಂಖ್ಯೆ 7895
ಶಾಸಕ ರಾಜು ಕಾಗೆ, ಅವರ ಸಹೋದರ, ಸಹೋದರನ ಮಗ ಹಾಗೂ ಕಾರು ಚಾಲಕನನ್ನು ಕಾರಾಗೃಹದ ಒಂದು ಕೋಣೆಯಲ್ಲಿಟ್ಟಿದ್ದಾರೆ. ಇಬ್ಬರೂ ಮಹಿಳಾ ಆರೋಪಿಗಳಾದ ಶಾಸಕ ರಾಜು ಕಾಗೆ ಸಹೋದರನ ಪತ್ನಿ ಹಾಗೂ ಮಗಳನ್ನು ಮಹಿಳಾ ವಿಭಾಗದ ಸೆಲ್ ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಶಾಸಕ ರಾಜು ಕಾಗೆಗೆ ಕೈದಿ ಸಂಖ್ಯೆ 7895 ನೀಡಲಾಗಿದೆ. ಏಕಾಂಗಿಯಾದ ಶಾಸಕ ರಾಜು ಕಾಗೆ ಜೈಲು ಊಟ ನಿರಾಕಸಿರಿ, ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಜೈಲಿನಲ್ಲಿ ಶಾಸಕ ರಾಜುಕಾಗೆ ಏಕಾಂಗಿ
ಹೆಚ್ಚಿನ ವಿಚಾರಣೆಗೆ ಮೂರು ದಿನಗಳ ಕಾಲ ಶಾಸಕ ರಾಜು ಕಾಗೆ ಸಹೋದರ, ಸಹೋದರನ ಮಗ ಹಾಗೂ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ರಾಜು ಕಾಗೆ ಸೆಲ್ ನಲ್ಲಿ ಏಕಾಂಗಿಯಾಗಿದ್ದಾರೆ. ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾರೆ. ಇತ್ತ ತನಿಖೆ ಚುರುಕುಗೊಳಿಸಿರುವ ಪೊಲೀಸರು ಇನ್ನುಳಿದ 7 ಮಂದಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments are closed.