ಕರ್ನಾಟಕ

ಲೋಕಾಯುಕ್ತ ಹುದ್ದೆಗೆ ಜಸ್ಟೀಸ್ ವಿಶ್ವನಾಥ್ ಶೆಟ್ಟಿ ನೇಮಕಕ್ಕೆ ಎಸ್.ಆರ್. ಹಿರೇಮಠ್ ವಿರೋಧ

Pinterest LinkedIn Tumblr


ಬೆಂಗಳೂರು(ಜ.09): ಲೋಕಾಯುಕ್ತ ಹುದ್ದೆಗೆ ಜಸ್ಟೀಸ್ ವಿಶ್ವನಾಥ ಶೆಟ್ಟಿ ಹಾಗೂ ಎಸ್ .ಆರ್. ನಾಯಕ್ ಅವರನ್ನ ಯಾವುದೇ ಕಾರಣಕ್ಕೂ ನೇಮಿಸಬಾರದು, ದಕ್ಷ ಹಾಗೂ ಪ್ರಮಾಣಿಕರನ್ನ ನೇಮಿಸಿ ಅಂತಾ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್ ಹಿರೇಮಠ್ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಯ ಘನತೆ ಮಣ್ಣು ಪಾಲಾಗಿದೆ.ಇಂತಹ ಸಂಸ್ಥೆಗೆ ದಕ್ಷ, ಪಾರದರ್ಶಕ, ನಿಷ್ಪಕ್ಷಪಾತ ವ್ಯಕ್ತಿಯನ್ನು ನೇಮಕ ಮಾಡಬೇಕು. ಜಸ್ಟಿಸ್ ವಿಶ್ವನಾಥ ಶೆಟ್ಟಿ ಸುಪ್ರೀಂ ಕೋರ್ಟ್`ನಲ್ಲಿ ಹತ್ತು ವರ್ಷ ವಕೀಲರಾಗಿ ಕೆಲಸ ಮಾಡಿದ್ದಾರೆ. ಡಿ.ಕೆ.ಶಿವಕುಮಾರ ಪರವಾಗಿ ಬೆನಿಗಾನಹಳ್ಳಿ ೪ ಎಕರೆ ೨೦ ಗುಂಟೆ ಜಮೀನು ಡಿನೋಟಿಫಿಕೇಶನ್ ವಿವಾದಿತ ಕೇಸ್`ಗೆ ವಕೀಲರಾಗಿ ಕೆಲಸ ಮಾಡಿದ್ದಾರೆ.ಆದ್ದರಿಂದ, ಇಂತಹ ವ್ಯಕ್ತಿಗಳನ್ನು ಲೋಕಾಯುಕ್ತಕ್ಕೆ ನೇಮಕ ಮಾಡಬಾರದು.ಇನ್ನೂ ವಿಶ್ವನಾಥ ಶೆಟ್ಟಿ ನ್ಯಾಯಾಂಗ ಬಡಾವಣೆಯಲ್ಲಿ ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದಾರೆ ಅಂತಾ ಹಿರೇಮಠ ಆರೋಪಿಸಿದ್ದಾರೆ.

Comments are closed.