ಕರ್ನಾಟಕ

ಗ್ಲಾಸ್ ಒರೆಸುವಾಗ ಬಿಬಿಎಂಪಿ ಚಾಲಕ ಸಾವು

Pinterest LinkedIn Tumblr


ಬೆಂಗಳೂರು, ಜ. ೭- ಮುಂಭಾಗದ ಗ್ಲಾಸನ್ನು ಒರೆಸುತ್ತಿದ್ದಾಗ ಏಕಾಏಕಿ ಚಲಿಸಿದ ಬಿಎಂಟಿಸಿ ಬಸ್ ಅಡ್ಡ ನಿಂತಿದ್ದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದು ಚಾಲಕ ರಮೇಶ್ ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಿಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕೆಂಗೇರಿಯ 12ನೇ ಡಿಪೋ ಚಾಲಕ ರಮೇಶ್ (40) ಬೆಳಿಗ್ಗೆ 6.30ರ ವೇಳೆ ಬಸ್‌ನ್ನು ಕಾರ್ಖಾನೆ ಉದ್ಯೋಗಿಗಳನ್ನು ಕರೆದುಕೊಂಡು ಹೋಗಲು ಮೆಜೆಸ್ಟಿಕ್ ಬಸ್ ನಿಲ್ದಾಣದ ಟರ್ಮಿನಲ್ 1ರಲ್ಲಿ ಬಸ್‌ನ್ನು ನಿಲ್ಲಿಸಿಕೊಂಡು ಇಂಜಿನ್ ಮೇಲೆ ನಿಂತು ಮಂಜಿನಿಂದ ಮೊಬ್ಬಾಗಿದ್ದ ಗ್ಲಾಸ್‌ನ್ನು ಒರೆಸುತ್ತಿದ್ದರು.
ಸರಿಯಾಗಿ ಹ್ಯಾಂಡ್ ಬ್ರೇಕ್ ಹಾಕಿರದಿದ್ದರಿಂದ ಇಳಿಜಾರಿನಲ್ಲಿ ನಿಂತಿದ್ದ ಬಸ್ ಏಕಾಏಕಿ ಚಲಿಸಿ ಅಡ್ಡ ನಿಲ್ಲಿಸಿದ್ದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ಗಳ ಮಧ್ಯೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ರಮೇಶ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಮಂಡ್ಯದವರಾದ ರಮೇಶ್ ಅಲ್ಲಿಂದಲೇ ಪ್ರತಿದಿನ ಕೆಲಸಕ್ಕೆ ಬಂದು ಹೋಗುತ್ತಿದ್ದರು. ಪ್ರಕರಣ ದಾಖಲಿಸಿರುವ ಉಪ್ಪಾರಪೇಟೆ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.