ಕರ್ನಾಟಕ

ಸ್ನೇಹಿತೆಯನ್ನು ಡ್ರಾಪ್ ಮಾಡಲು ಬಂದಿದ್ದ ಯುವಕನ ಮೇಲೆ ಕಾರ್ಪೊರೇಟರ್ ರಿಂದ ಹಲ್ಲೆ

Pinterest LinkedIn Tumblr


ಬೆಂಗಳೂರು(ಜ.05): ಯುವತಿಯನ್ನ ಡ್ರಾಪ್ ಮಾಡಲು ತೆರಳಿದ್ದ ಯುವಕನ ಮೇಲೆ ಕಾರ್ಪೋರೇಟರ್ ಹಾಗು ಸಹಚರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ, ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.
ಹೆಣ್ಣೂರು ಮೂಲದ ಗಿರಿ ಎಂಬಾತನ ಮೇಲೆ ಹೆಚ್ ಬಿ ಆರ್ ಲೇಔಟ್ ನ ವಾರ್ಡ್ ನಂಬರ್ 24 ರ ಕಾರ್ಪೋರೇಟರ್ ನಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಿನ್ನೆ ರಾತ್ರಿ ಹತ್ತೂವರೆ ಸಮಯದಲ್ಲಿ ಗಿರಿ ತನ್ನ ಗರ್ಲ್ ಫ್ರೆಂಡ್ ಅನ್ನು ಡ್ರಾಪ್ ಮಾಡಲು ಬೈಕ್ ನಲ್ಲಿ ತೆರಳಿದ್ದರು. ಡ್ರಾಪ್ ಮಾಡಿದ ನಂತರ ಅಲ್ಲೇ ನಿಂತು ಮಾತನಾಡುತ್ತಿದ್ದ ಗಿರಿಯನ್ನು ಗಮನಿಸಿದ್ದ ಕಾರ್ಪೋರೇಟರ್ ನಂದ, ಯುವತಿಯೊಂದಿಗೆ ಯಾಕೆ ಮಾತನಾಡುತ್ತಿದ್ದೀಯಾ ಎಂದು ಪ್ರೆಶ್ನಿಸಿ ಮೊಬೈಲ್’ನಲ್ಲಿ ಫೋಟೋವನ್ನು ತೆಗೆಯಲು ತೆರಳಿದ್ದರು. ಇದನ್ನು ಅಡ್ಡಿಪಡಿಸಲು ತೆರಳಿದ ಗಿರಿ ಮೇಲೆ, ಕುಡಿದು ತೂರಾಡುತ್ತಿದ್ದ ಕಾರ್ಪೋರೇಟರ್ ಹಲ್ಲೆ ಮಾಡಿ, ಆತನ ಮಗ ಹಾಗು ಸಹಚರರನ್ನ ಕರೆಯಿಸಿ ಅವರಿಂದಲೂ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿ ಯುವಕ ರಾತ್ರಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾನೆ.
ಸದ್ಯ ದೂರು ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.