ಕರ್ನಾಟಕ

ಕರ್ನಾಟಕದ ಕಾಶ್ಮೀರದಲ್ಲಿ ಮದ್ಯವ್ಯಸನಿಗಳ ಹಾವಳಿ

Pinterest LinkedIn Tumblr

bottels
ಚಿಕ್ಕಮಗಳೂರು: ‘ಹಸಿರು ಗಿರಿಶಿಖರಗಳ ನಡುವೆ ತಲೆ ಎತ್ತಿರುವ ಹೋಂ ಸ್ಟೈ ಗಳಿಂದ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ವಿವಿಧ ರಾಜ್ಯಗಳಿಂದ ಪ್ರಕೃತಿ ಸೌಂದರ್ಯ ಅನಿಭವಿಸಲು ಬರುವ ಪ್ರವಾಸಿಗರು ಮದ್ಯ ಸೇವಿಸಿ, ಬಿಯರ್‌ ಬಾಟಲ್‌, ಇತರೇ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ’ ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಚಕ ಧರಣೇಶ್ ಗಂಗಾಧರ ಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯನ್ನು ರಾಜ್ಯದ ಕಾಶ್ಮೀರವೆಂದು ಕರೆಯುತ್ತಾರೆ. ಪ್ರಕೃತಿ ಸೌಂದರ್ಯದಿಂದ ಹೊದ್ದು ಮಲಗಿರುವ ಜಿಲ್ಲೆಗೆ ಸಾವಿರಾರು ಪ್ರವಾಸಿರು ಪ್ರತಿದಿನ ಹಾಗೂ ವಾರಾಂತ್ಯ ರಜೆ ದಿನಗಳಲ್ಲಿ ಬರುತ್ತಾರೆ. ಹೀಗೆ ಬಂದವರಲ್ಲಿ ಹಲವು ಮಂದಿ ಮದ್ಯ ಸೇವಿಸಿ, ಪರಿಸರಕ್ಕೆ ಮಾರಕ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿದಿಂದ ದತ್ತಾತ್ರೇಯ ಪೀಠದಲ್ಲಿ ಹೋಮ, ಹವನಗಳಿಗೆ ನಿರ್ಮಿಸಿದ್ದ ಟೆಂಟ್ ಪ್ರಸ್ತುತ ಅಡುಗೆ ನಿರ್ಮಾಣದ ಕೇಂದ್ರವಾಗಿದೆ. ಅಲ್ಲಿ ಮಾಂಸ ಖಾದ್ಯ ಬಳಸುತ್ತಿರುವುದರಿಂದ ಅದು ಗಬ್ಬುನಾರುತ್ತಿದೆ. ಅಡುಗೆ ನಂತರ ಪ್ಲಾಸ್ಟಿಕ್‌ ತ್ಯಾಜ್ಯಗಳು, ಮದ್ಯದ ಬಾಟಲ್‌ಗಳು, ಕೊಳಕು ನೀರು, ಮಾಂಸಹಾರಿ ಖಾಧ್ಯ ಸೇರಿದಂತೆ ಇತರೇ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಜಿಲ್ಲಾಡಳಿತ ದತ್ತ ಜಯಂತಿ ಹಾಗೂ ಉರೂಸು ಸಂದರ್ಭದಲ್ಲಿ ಮಾತ್ರ ಈ ಬಗ್ಗೆ ಹೆಚ್ಚಿನ ಗಮನಹರಿಸುತ್ತದೆ. ಉಳಿದ ದಿನಗಳಲ್ಲಿ ಏಕೆ ಕಟ್ಟು, ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಪೀಠದಿಂದ ಸುಮಾರು 4 ಕಿಲೋ ಮೀಟರ್‌ ಅನತಿ ದೂರದಲ್ಲಿ ಗಾಳಿಕೆರೆ ಕೆಂಚರಾಯಸ್ವಾಮಿಯ ಸುಂದರ ತಾಣವಿದೆ. ಹರಕೆ ನೀಡಲು ಅಲ್ಲಿಗೆ ಬರುವ ಭಕ್ತಾಧಿಗಳಿಗೆ ಮೂಲಸೌಲಭ್ಯಗಳೇ ಇಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ತಿಳಿಸಿದ್ದರೂ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಮುಜರಾಯಿ ಇಲಾಖೆಯಿಂದ ದೇವಾಲಯದ ಜೀರ್ಣೋದ್ಧಾರ ಕೆಲಸ ಪ್ರಾರಂಭವಾಗಿ 1 ವರ್ಷ ಕಳೆದಿದೆ. ಆದರೂ, ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಪ್ರಸ್ತುತ ಆಗಿರುವ ಕೆಲಸ ಕಳಪೆ ಗುಣಮಟ್ಟದಿಂದ ಕೂಡಿದೆ. ಮಳೆ ಬಂದರೆ ದೇವಾಲಯದ ಹಲವೆಡೆ ನೀರು ಸೋರಿಕೆಯಾಗುತ್ತದೆ. ಈ ಬಗ್ಗೆ ಕೂಡಲೇ ಶಾಸಕರು ಮತ್ತು ಜಿಲ್ಲಾಡಳಿತ ಗಮನ ಹರಿಸಬೇಕು. ಬರುವ ಭಕ್ತಾಧಿಗಳಿಗೆ ಸಮರ್ಪಕ ವ್ಯವಸ್ಥೆ ಒದಗಿಸಬೇಕು. ಸುಂದರ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.

Comments are closed.