ಕರ್ನಾಟಕ

ಕೋಲಾರ-ಚಿಕ್ಕಬಳ್ಳಾಪುರದ ಬ್ಯಾಂಕ್ ಗಳಲ್ಲಿ ಖೋಟಾನೋಟುಗಳ ಹಾವಳಿ

Pinterest LinkedIn Tumblr

note22

ಕೋಲಾರ,ಜ.3- ನೋಟು ರದ್ದತಿ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಬ್ಯಾಂಕ್‍ಗಳಲ್ಲಿ ಖೋಟಾ ನೋಟುಗಳು ಹರಿದಾಡುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕೋಲಾರ ತಾಲೂಕಿನ ಮದ್ದೇರಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಶಾಖೆಯಲ್ಲಿ 500 ಮತ್ತು 1000ರೂ. ಮುಖಬೆಲೆಯ 2 ಲಕ್ಷದ 60 ಸಾವಿರ ರೂಪಾಯಿ ಮೌಲದ್ಯ ಖೋಟಾ ನೋಟು ಪತ್ತೆಯಾಗಿದೆ.
ಹೊಸಮಟ್ನಹಳ್ಳಿಯ ನಂಜುಂಡಗೌಡ ಎಂಬುವರು ಮೊದಲಿಗೆ ಸಹೋದರ ಅಪ್ಪಾಜಿಗೌಡರ ಮೂಲಕ 6 ಖಾತೆಗಳಿಗೆ 3 ಲಕ್ಷ 93 ಸಾವಿರ ರೂ. ಜಮಾ ಮಾಡಿದರು. ನಂತರ ಉಳಿದ 5 ಖಾತೆಗೆ ತಾವೇ 7 ಲಕ್ಷದ 66 ಸಾವಿರ ರೂ. ಠೇವಣಿ ಇಟ್ಟರು. ಆದರೆ ಬ್ಯಾಂಕಿನ ಹಣವನ್ನು ಕೆಜಿಎಫ್‍ನ ಖಜಾನೆಗೆ ರವಾನಿಸಿದಾಗ 500ರ 441 ನೋಟುಗಳು ಮತ್ತು 1000 ಮುಖಬೆಲೆಯ 14 ನೋಟುಗಳು ಖೋಟಾನೋಟ್ ಎಂಬುದು ಪತ್ತೆಯಾಗಿತ್ತು.
ಪ್ರಕರಣ ಸಂಬಂಧ ನಂಜುಂಡೇಗೌಡ, ಸಹೋದರ ಅಪ್ಪಾಜಿಗೌಡ ಹಾಗೂ ಕ್ಯಾಷಿಯರ್ ಲಕ್ಷ್ಮಣ್ ವಿರುದ್ಧ ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೂರು ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರದ ಚಿಂತಾಮಣಿಯ ಕರ್ನಾಟಕ ಬ್ಯಾಂಕ್‍ನಲ್ಲಿ ಡಿ.2ರಂದು ಇದೇ ರೀತಿ 1ಲಕ್ಷದ 80ಸಾವಿರ ರೂಪಾಯಿ ಖೋಟಾನೋಟು ಪತ್ತೆಯಾಗಿತ್ತು. ಅನಿಲ್ ಎಂಬುವರ ಮೂಲಕ ರವೀಂದ್ರ ಎಂಬಾತ ಹಣ ಜಮಾ ಮಾಡಲು ಕಳುಹಿಸಿದ್ದ. ಆದರೆ ಇದು ಖೋಟಾನೋಟ್ ಎಂದು ಪತ್ತೆ ಹಚ್ಚಿದ ಬ್ಯಾಂಕ್ ವ್ಯವಸ್ಥಾಪಕ ತಕ್ಷಣ ಪೊಲೀಸರಿಗೆ ದೂರು ನೀಡಿದರು. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಇದರ ಬೆನ್ನಲ್ಲೇ ಮತ್ತೊಂದು ಖೋಟಾನೋಟು ಪ್ರಕರಣ ಬಯಲಿಗೆ ಬಂದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

Comments are closed.