ಕರ್ನಾಟಕ

ಸಿ.ಎಂ. ಇಬ್ರಾಹಿಂ ವಿರುದ್ಧ ಮಗಳ ಗರ್ಭಪಾತ ಮಾಡಿಸಿದ ಆರೋಪ

Pinterest LinkedIn Tumblr

ibrahim
ಬೆಂಗಳೂರು: ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ತಮ್ಮ ಪುತ್ರಿ ಇಫಾ ಅವರಿಗೆ ಗರ್ಭಪಾತ ಮಾಡಿಸಿ ಭ್ರೂಣಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಪ್ರಕರಣ ಸಂಬಂಧ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

ನಾಲ್ಕುವರೆ ತಿಂಗಳ ಗರ್ಭಿಣಿಯಾಗಿದ್ದ ಪುತ್ರಿ ಇಫಾ ತವರು ಮನೆಗೆ ಬಂದಾಗ ಇಬ್ರಾಹಿಂ ಅವರು ಮಗಳಿಗೆ ಹಣ್ಣಿನ ರಸದಲ್ಲಿ ಗರ್ಭಪಾತದ ಮಾತ್ರೆ ಬೆರೆಸಿ ಕೊಟ್ಟಿದ್ದಾರೆ ಎಂದು ಅವರ ಪುತ್ರಿಯೇ(ಇಫಾ) ಆರೋಪಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.

ಸಿಎಂ ಇಬ್ರಾಹಿಂ ಅವರ ಪುತ್ರಿ ಇಫಾ ಏಳು ತಿಂಗಳ ಹಿಂದೆ ಅಪ್ಪನ ವಿರೋಧ ಕಟ್ಟಿಕೊಂಡು (ಇಬ್ರಾಹಿಂ ಸಹೋದರನ ಪುತ್ರನ ಜತೆ) ಪ್ರೇಮ ವಿವಾಹವಾಗಿದ್ದರು. ಮಗಳು ಮನೆಗೆ ಬಂದಾಗ ಇಬ್ರಾಹಿಂ ಅವರು ಗರ್ಭಪಾತ ಮಾತ್ರೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸಿಎಂ ಫೈಸಲ್‌ ಮತ್ತು ಸಿಎಂ ಇಫಾ ಪ್ರೀತಿಸಿ ಮದುವೆಯಾಗಿದ್ದರು. ನಿನ್ನೆ ಬೆಳಿಗ್ಗೆ ಇಫಾಗೆ ಅವಳ ತಾಯಿ ಹಣ್ಣಿನ ರಸವನ್ನು ಕುಡಿಯಲು ನೀಡಿದ್ದಾರೆ. ಇದನ್ನು ಕುಡಿದ ಬಳಿಕ ಇಫಾಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಳಿಕ, ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ ಎಂದು ಸಿಎಂ ಇಬ್ರಾಹಿಂ ಅವರ ಸಹೋದರ ಸಿಎಂ ಖಾದರ್‌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ.

ಸಿಎಂ ಇಬ್ರಾಹಿಂ ಅವರು ಪುತ್ರಿಯ ಪ್ರೇಮ ವಿವಾಹವನ್ನು ವಿರೋಧಿಸಿದ್ದರು. ಆದ್ದರಿಂದ, ಅಸಮಾಧಾನಗೊಂಡಿರುವ ಅವರು(ಇಬ್ರಾಹಿಂ) ಬಲವಂತವಾಗಿ ಮಗಳಿಗೆ ಗರ್ಭಪಾತ ಮಾಡಿಸಿದ್ದಾರೆ. ನಾನು ಅಣ್ಣನ(ಇಬ್ರಾಹಿಂ) ವಿರುದ್ಧ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಖಾದರ್‌ ಹೇಳಿಕೊಂಡಿದ್ದಾರೆ.

ದೂರು ದಾಖಲಾಗಿಲ್ಲ: ಪ್ರಕರಣ ಸಂಬಂಧ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

Comments are closed.