ಕರ್ನಾಟಕ

ಹೃದಯಾಘಾತದಿಂದ ಸಚಿವ ಮಹದೇವ ಪ್ರಸಾದ್ ನಿಧನ

Pinterest LinkedIn Tumblr

mahadeva1

ಚಿಕ್ಕಮಗಳೂರು: ಸಕ್ಕರೆ ಹಾಗೂ ಸಹಕಾರಿ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರು ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಸಚಿವರು ಖಾಸಗಿ ಕಾರ್ಯಕ್ರಮ ನಿಮಿತ್ತ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಇಲ್ಲಿನ ಸರಾಯ್‌ ರೆಸಾರ್ಟ್‌ನಲ್ಲಿ ಸಚಿವರು ತಂಗಿದ್ದರು. ರಾತ್ರಿ ಊಟ ಮಾಡಿದ ಬಳಿಕ ತಾವು ತಂಗಿದ್ದ ಕೋಣೆಯ ಬಾಗಿಲು ಹಾಕಿಕೊಂಡು ಮಲಗಿದ್ದರು.

ಬೆಳಗ್ಗೆ ವಾಕಿಂಗ್‌ ಮಾಡಲು ಬರದಿದ್ದಾಗ ಸಚಿವರ ಅಂಗ ರಕ್ಷಕರು ಬಾಗಿಲು ಬಡೆದಿದ್ದಾರೆ. ಆಗಾ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಒಡೆದು ಒಳ ಪ್ರವೇಶಿಸಿ ನೋಡಿದಾಗ ಹಾಸಿಗೆಯ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಮಹದೇವ್‌ ಪ್ರಸಾದ್‌ ಸಾವನ್ನಪ್ಪಿದ್ದರು ಎಂದು ವರದಿಗಳು ತಿಳಿಸಿವೆ.

ಬೆಳಗ್ಗೆ 5 ರಿಂದ 6 ಗಂಟೆಯ ವೇಳೆ ಹೃದಯಾಘಾತ ಸಂಭವಿಸಿರಬಹುದು ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಕೆಲ ಕಾರ್ಯಕರ್ತರು ರೆಸಾರ್ಟ್‌ನಲ್ಲಿ ಜಮಾವಣೆಗೊಂಡಿದ್ದಾರೆ. ನಂತರ ಆಸ್ಪತ್ರಗೆ ಕರೆತಂದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವರ ಮೃತದೇಹವನ್ನು ಹೆಲಿಕಾಫ್ಟರ್‌ ಮೂಲಕ ಬೆಂಗಳೂರಿಗೆ ತರಲಾಗುವುದು.

Comments are closed.