ಕರ್ನಾಟಕ

ಸ್ವೈಪಿಂಗ್ ಮಷೀನ್ ಸಮಸ್ಯೆ- ಟೋಲ್‍ಗಳಲ್ಲಿ ಸುಸ್ತಾದ ಜನ

Pinterest LinkedIn Tumblr

nml-toll
ಬೆಂಗಳೂರು: 500 ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿರುವ ಹಿನ್ನಲೆಯಲ್ಲಿ ಹೆದ್ದಾರಿಗಳಲ್ಲಿರುವ ಟೋಲ್‍ಗಳಲ್ಲಿ ಕಾರ್ಡ್ ಸ್ವೈಫಿಂಗ್ ಮಿಷಿನ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರು ಸುಮಾರು ಹೊತ್ತು ಕಾಯುವ ಪರಿಸ್ಥಿತಿ ಎದುರಾಗಿದ್ದು, ಕಿರಿಕಿರಿ ಅನುಭವಿಸಿದ್ದಾರೆ.

ನೋಟ್ ಬ್ಯಾನ್ ಹಿನ್ನಲೆಯಲ್ಲಿ ಚಿಲ್ಲರೆ ಸಮಸ್ಯೆಯಿಂದ ವಾಹನ ಸವಾರರು ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಲು ಮುಂದಾಗಿದ್ದಾರೆ. ಆದರೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍ನಲ್ಲಿ ಹಣ ಪಾವತಿ ಮಾಡುವಾಗ ಒಂದೊಂದು ಕಾರ್ಡ್‍ಗೆ ಐದಾರು ನಿಮಿಷ ಕಾಯುವ ಪರಿಸ್ಥಿತಿ ಎದುರಾಗುತ್ತಿದೆ. ಈ ಪರಿಸ್ಥಿತಿ ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಹಾಗೂ ಜಾಸ್ ಟೋಲ್ ಗೇಟ್‍ಗಳಲ್ಲಿ ಕಾಣಬಹುದಾಗಿದೆ.

ಕೆಲವೊಮ್ಮೆ ನೆಟ್‍ವರ್ಕ್ ಸಮಸ್ಯೆ, ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದ ಹೆದ್ದಾರಿ ಟೋಲ್‍ಗಳಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ವಾಹನ ಸವಾರರು ದೂರಿದ್ದಾರೆ. ಅಲ್ಲದೆ ಟೋಲ್ ಕಂಪನಿಗಳು ಸಹ ವಾಹನ ಸವಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸವಾರರು ಒತ್ತಾಯಿಸಿದ್ದಾರೆ.

Comments are closed.