ಬೆಂಗಳೂರು(ಡಿ.20): ರಕ್ತ ಪೂರೈಕೆ ವೇಳೆ ಮಹಿಳೆಗೆ ಹೆಚ್.ಐ.ವಿ ಸೋಂಕು ತಗುಲಿರುವ ಆರೋಪ ಹಿನ್ನೆಲೆ, ರಾಮಯ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನರೇಂದ್ರನಾಥ್ ಸೇರಿದಂತೆ 14 ಜನರ ವಿರುದ್ಧ ಸದಾಶಿವನ ನಗರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಗರ್ಭಕೋಶ ಸಮಸ್ಯೆಯಿಂದ ಚಿಕಿತ್ಸೆಗೆ ದಾಖಲಾಗಿದ್ದರು ಈ ವೇಳೆ ದೇಹಕ್ಕೆ ರಕ್ತ ಪೂರೈಸಿದ ಬಳಿಕ HIV ಸೋಂಕು ತಗುಲಿದೆ ಎಂದು ಮಹಿಳೆ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ 7ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.
ಐಪಿಸಿ ಸೆಕ್ಷನ್ 120ಬಿ, 320, 324, 336 ಮತ್ತು, 338ರ ಅಡಿ ಎಫ್.ಐ.ಆರ್ ದಾಖಲಾಗಿದ್ದು, ಸದಾಶಿವನಗರ ಪೊಲೀಸರಿಂದ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಂಡಿದೆ.