ಕರ್ನಾಟಕ

ವೇಶ್ಯಾವಾಟಿಕೆ ತಾಣದಲ್ಲಿ ಕಾರ್ಡ್ ಸ್ವೈಪಿಂಗ್ ಮೆಷಿನ್ ಪತ್ತೆ!

Pinterest LinkedIn Tumblr

swipeಬೆಂಗಳೂರು: 500 ಹಾಗೂ ಒಂದು ಸಾವಿರ ರೂಪಾಯಿಯ ನೋಟ್ ಬ್ಯಾನ್ ಎಫೆಕ್ಟ್ ವೇಶ್ಯಾವಾಟಿಕೆ ದಂಧೆಗೂ ತಟ್ಟಿದೆ. ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಮನೆಯೊಂದರ ಮೇಲೆ ಪರಪ್ಪನ ಅಗ್ರಹಾರ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಕಾರ್ಡ್ ಸ್ವೈಪಿಂಗ್ ಮೆಷಿನ್ ಪತ್ತೆಯಾಗಿದೆ.

ಎಲೆಕ್ಟ್ರಾನಿಕ್ ಸಿಟಿಯ ಆನಂದ್‍ರೆಡ್ಡಿ ಲೇಔಟ್‍ನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಪಶ್ಚಿಮ ಬಂಗಾಳದಿಂದ ಮಹಿಳೆಯರನ್ನು ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿ ಅವರಿಗೆ ಹಣದ ಆಮಿಷ ತೋರಿಸಿ ಕಾನೂನು ಬಾಹಿರವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಉತ್ತರ ಪ್ರದೇಶದ ಅಲ್ಕಾ ಸಿಂಗ್ ಹಾಗೂ ಬೆಂಗಳೂರಿನ ನಹೀಂ ಬಂಧಿತರು.

ಏನೇನು ಸಿಕ್ತು?: ಪರಪ್ಪನ ಅಗ್ರಹಾರ ಪೊಲೀಸರ ದಾಳಿ ವೇಳೆ 3 ಸಾವಿರ ರೂ. ನಗದು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಮೆಷಿನ್, 5 ಮೊಬೈಲ್ ಫೋನ್ ಹಾಗೂ 2 ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಬೈಕನ್ನು ನಹೀಂ ಗ್ರಾಹಕರನ್ನು ಈ ಮನೆಗೆ ಕರೆ ತರಲು ಬಳಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

Comments are closed.