ಕರ್ನಾಟಕ

ಡಿ.ಕೆ.ರವಿಯನ್ನು ಇಷ್ಟಪಡಲು 12 ಕಾರಣಗಳಿವೆ

Pinterest LinkedIn Tumblr

ravi20 ತಿಂಗಳ ಕಾಲ ತನಿಖೆ ನಡೆಸಿದ ಸಿಬಿಐ ಡಿಕೆ ರವಿಯವರ ಸಾವು ಕೊಲೆಯಲ್ಲ, ವೈಯಕ್ತಿಕ ಕಾರಣಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವರದಿ ಸಲ್ಲಿಸುವ ಮೂಲಕ ಪ್ರಕರಣವನ್ನು ಕ್ಲೋಸ್ ಮಾಡಿದೆ. ಪ್ರಕರಣ ಕ್ಲೋಸ್ ಆಗಿದ್ದರೂ ಡಿಕೆ ರವಿ ಅವರ ಜನರ ಜೊತೆ ನಡೆದುಕೊಂಡ ರೀತಿ, ಮತ್ತು ಅವರ ಕೆಲಸ ಇನ್ನು ಜನಮನಸದಲ್ಲಿ ಇದೆ. ಹೀಗಾಗಿ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ರವಿ ಅವರ ಕೆಲಸದ ಶೈಲಿಯ ಕಿರು ಪರಿಚಯ ಇಲ್ಲಿದೆ.

ಕೋಲಾರ ಎಂದರೆ ಅದು ಬರಗಾಲ ಪೀಡಿತ ಜಿಲ್ಲೆ. ಅವರಿಗೆ ಕುಡಿಯಲು ನೀರು ಇಲ್ಲ. ವರ್ಷದ 365 ದಿನಗಳೂ ಕೂಡಾ ನೀರಿಗಾಗಿ ಅಲೆದಾಡುತ್ತಾರೆ ಎಂಬ ಕುಖ್ಯಾತಿಯಿತ್ತು. ಚುನಾವಣೆ ವೇಳೆ ಕಾಣಿಸಿಕೊಳ್ಳುವ ಜನಪ್ರತಿನಿಧಿಗಳ ಭರ್ಜರಿ ಭರವಸೆಗಳ ನಡುವೆಯೇ ಜನರು ಸಂಕಷ್ಟದ ಬದುಕು ಸಾಗಿಸುತ್ತಿದ್ದರು. ಆದರೆ ಕೋಲಾರ ಜನರ ಕನಸು ನನಸಾಗಲು ಏನಾದರೂ ಒಂದು ಮಿರಾಕಲ್ ನಡೆಯಲೇ ಬೇಕಿತ್ತು. ಅಂತಹ ಒಂದು ಅಚ್ಚರಿ ನಡೆದದ್ದು 2013ರ ಆಗಸ್ಟ್ 19.

ಅಂದು ಕೋಲಾರದಲ್ಲಿ ಹೊಸ ಜಿಲ್ಲಾಧಿಕಾರಿಯೊಬ್ಬರು ಅಧಿಕಾರ ಸ್ವೀಕರಿಸಿದರು. ಅವರ ಹೆಸರು ಡಿ.ಕೆ.ರವಿ. ಇದಕ್ಕೂ ಮುನ್ನ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಗುಲ್ಬರ್ಗದಲ್ಲಿ ಎಸಿ ಆಗಿ ಕೆಲಸ ನಿರ್ವಹಿಸಿದ್ದ ಡಿ.ಕೆ.ರವಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದವರು.

ಸುಮಾರು 36ರ ಆಸುಪಾಸಿನಲ್ಲಿದ್ದ ಡಿ.ಕೆ ರವಿಯವರ ಮುಖದಲ್ಲಿ ಒಂದು ರೀತಿಯ ಗಾಂಭೀರ್ಯತೆ ಇತ್ತು. ರವಿ ಅವರು ನೋಡಲು ಎಷ್ಟು ಮೃದುವೋ ಅಷ್ಟೇ ಖಡಕ್ ಅಧಿಕಾರಿ. ಇಂಥ ಒಬ್ಬ ಅಧಿಕಾರಿ ಕೋಲಾರಕ್ಕೆ ಬಂದಾಗ, ಕೋಲಾರದ ಜನ ನಮ್ ಡಿಸಿ ಇನ್ನೂ ಸಖತ್ ಯಂಗ್ ಇದ್ದಾರೆ, ಒಳ್ಳೆ ಕೆಲ್ಸ ಮಾಡ್ತಾರೆ ಅನ್ಸುತ್ತೆ ಅಂಥಾ ಏನೇನೋ ಭರವಸೆಯ ಲೆಕ್ಕಾಚಾರ ಶುರು ಮಾಡಿದ್ದರು. ಜನರ ನಿರೀಕ್ಷೆ ಸುಳ್ಳಾಗಲಿಲ್ಲ. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ರವಿ ಆರಂಭದಲ್ಲೇ ತಮ್ಮ ಕೆಲಸದ ಶೈಲಿಯನ್ನು ತೋರಿಸಲು ಶುರು ಮಾಡಿದ್ರು. ನೋಡ ನೋಡುತ್ತಿದ್ದಂತೆ ತಮ್ಮ ಚುರುಕಿನ ಕೆಲಸದ ವೈಖರಿಯನ್ನು ಮೊದಲು ಅಧಿಕಾರಿಗಳಿಗೆ ತೋರಿಸಿದ್ರು. ನಿದ್ದೆಗೆ ಜಾರಿದ್ದ ತಮ್ಮ ಸಿಬ್ಬಂದಿ ವರ್ಗವನ್ನು ಎಚ್ಚರಿಸಿ ಆಮೇಲೆ ಕೋಲಾರದ ಜನರ ಕಡೆ ಹೊರಟರು.

Comments are closed.