ರಾಯಚೂರು(ನ.22): ನೋಟ್ ಬ್ಯಾನ್ ಮಾಡಿ 13ದಿ ನ ಕಳೆದರೂ ಜನರ ಚಿಲ್ಲರೆ ಹಣದ ಪರದಾಟ ಇನ್ನೂ ನಿಂತಿಲ್ಲ. ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಕ್ಯೂ ನಿಲ್ಲುವುದು ಎಂದಿನಂತೆ ಮುಂದುವರದಿದೆ. ಜನರ ಈ ಸಮಸ್ಯೆ ನಿವಾರಿಸಲು ಎಸ್`ಬಿಐ ಬ್ಯಾಂಕಿನವರು ಕ್ಯಾಶ್ ಆಟ್ ಪಾಸ್ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಪೆಟ್ರೋಲ್ ಬಂಕ್ ಗಳಲ್ಲೂ ಹಣ ದೊರೆಯುವಂತೆ ಮಾಡಿದ್ದಾರೆ. ಜನರು ಬ್ಯಾಂಕ್ ಮುಂದೆ ಕ್ಯೂ ನಿಲ್ಲದೆ ಎಟಿಎಂ ಕಾರ್ಡ್ ಸ್ವೈಪ್ ಮಾಡುವ ಮೂಲಕ ಹಣ ಪಡೆಯಬಹುದಾಗಿದೆ.