ಕರ್ನಾಟಕ

ಮಹದಾಯಿ ಪ್ರತಿಭಟನೆ ವೇಳೆಯ ಬಂಧಿಸಲ್ಪಟ್ಟ ಅಮಾಯಕ ರೈತರ ಮೇಲಿನ ಕೇಸ್​​ ಹಿಂಪಡೆಯತ್ತೇವೆ: ವಿಧಾನಮಂಡಲ ಅಧಿವೇಶನದಲ್ಲಿ ಪರಮೇಶ್ವರ್

Pinterest LinkedIn Tumblr

parmeshwarappaಬೆಳಗಾವಿ (ನ.22): ಎರಡನೇ ದಿನವೂ ವಿಧಾನಮಂಡಲ ಅಧಿವೇಶನದಲ್ಲಿ ಮಹದಾಯಿ ಪ್ರತಿಭಟನೆ ವೇಳೆ ರೈತರ ಬಂಧನ ಬಗ್ಗೆ ಚರ್ಚೆ ನಡೆಯಿತು.
ಅಮಾಯಕ ರೈತರ ಮೇಲಿನ ಎಲ್ಲಾ ಕೇಸ್ ಹಿಂಪಡೆಯುವಂತೆ ವಿಪಕ್ಷಗಳು ಆಗ್ರಹಿಸಿದವು. ವಿಧಾನಸಭೆ ಪ್ರಶ್ನೋತ್ತರ ವೇಳೆ ಕುಡುಚಿ ಶಾಸಕ ರಾಜೀವ್, ರೈತರ ಮೇಲೆ ಡಕಾಯಿತಿ ಪ್ರಕರಣ ಹಾಕಿದ್ದಾರೆ, ಚಳವಳಿ ಹತ್ತಿಕ್ಕುವ ಅಧಿಕಾರ ಸರ್ಕಾರಕ್ಕೆ ಇದೆಯಾ? ಕೂಡಲೇ ರೈತರ ಮೇಲಿನ ಕೇಸ್ ತೆಗೆದುಹಾಕಿ ಅಂತ ರಾಜೀವ್ ಆಗ್ರಹಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಶಾಂತಿಯುತ ಪ್ರತಿಭಟನೆಗೆ ನಮ್ಮ ಆಕ್ಷೇಪ ಇಲ್ಲ, ಆದರೆ ಪ್ರತಿಭಟನೆ ವೇಳೆ 12 ಕಚೇರಿಗಳನ್ನು ಸುಟ್ಟು ಹಾಕಿದ್ದಾರೆ. ಈ ಘಟನೆ ನಡೆಯಬಾರದಿತ್ತು, ಆದರೆ ಬಗ್ಗೆ ವಿಷಾದಿಸುತ್ತೇನೆ, ಅಮಾಯಕ ರೈತರ ಮೇಲಿನ ಕೇಸ್ ಹಿಂಪಡೆಯತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

Comments are closed.