ಕರ್ನಾಟಕ

ಚಳಿಗಾಲದ ಅಧಿವೇಶನದ ಮೊದಲ ದಿನ ಮದುವೆಗಾಗಿ ಗೈರಾದ ಶಾಸಕರು

Pinterest LinkedIn Tumblr

adi

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಿನ್ನೆ ಆರಂಭವಾದ ಚಳಿಗಾಲದ ಅಧಿವೇಶನದ ಮೊದಲ ದಿನ ಕೇವಲ ಕೆಲವೇ ಕೆಲವು ಶಾಸಕರು ಮಾತ್ರ ಸದನದಲ್ಲಿ ಹಾಜರಿದ್ದರು.

ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರ ಪರಿಹಾರ ಸಂಬಂಧ ಸದನದಲ್ಲಿ ಚರ್ಚಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಬೆಳಗಾವಿ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕಾ ಖಾತೆ ಸಚಿವ ರಮೇಶ್ ಜಾರಕಿ ಹೊಳಿಪುತ್ರನ ಅದ್ಧೂರಿ ವಿವಾಹಕ್ಕೆ ಶಾಸಕರು ಹಾಜರಾಗಿದ್ದರು.

224 ಶಾಸಕರಲ್ಲಿ ಕೇವಲ 182 ಶಾಸಕರು ಮಾತ್ರ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದ್ದರು. ಆದರೆ ಕೇವಲ 64 ಶಾಸಕರು ಮಾತ್ರ ಸದನದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆಡಂಭರದ ವಿವಾಹಗಳಿಗೆ ಹೋಗದಂತೆ ತಮ್ಮ ಪಕ್ಷದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು ಯಾರು ಅದಕ್ಕೆ ಸೊಪ್ಪು ಹಾಕಲಿಲ್ಲ.

ಪಕ್ಷದ ಗೆರೆ ದಾಟಿ ಸಕ್ಕರೆ ಉದ್ಯಮಿ ರಮೇಶ್ ಜಾರಕಿ ಹೊಳಿ ಪುತ್ರನ ವಿವಾಹಕ್ಕೆ ಹಾಜರಾಗಿದ್ದರು. ಉದ್ಯಮಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಲಕ್ಷಾಂತರ ಮಂದಿಗೆ ರಮೇಶ್ ಜಾರಕಿಹೊಳಿ ಕೆಂಪು ಹಾಸು ಹಾಕಿ ಸ್ವಾಗತಿಸಿದರು.

Comments are closed.